Advertisement
ಬೆಂಗಳೂರು ನಗರದ 800 ಚ.ಕಿ.ಮೀ ಕಾರ್ಯವ್ಯಾಪ್ತಿಯಲ್ಲಿ ನೀರು ಸರಬರಾಜು ಹಾಗೂ ತ್ಯಾಜ್ಯ ನೀರಿನ ಶುದ್ಧೀಕರಣ ಹಾಗೂ ವಿಲೇವಾರಿ ಜವಾಬ್ದಾರಿ ವಸಿಕೊಂಡಿರುವ ಜಲಮಂಡಳಿಯು ನಿತ್ಯ 1,453 ದಶಲಕ್ಷ ಲೀ.ನಷ್ಟು ನೀರನ್ನು ಪೂರೈಸುತ್ತಿದೆ.
Related Articles
Advertisement
ಇದರ ಜೊತೆಗೆ ಎತ್ತಿನ ಹೊಳೆಯೋಜನೆಯಿಂದ ನೀರು ತರಲಾಗುತ್ತಿದ್ದು, ಇದಕ್ಕಾಗಿ ತಿಪ್ಪಗೊಂಡನಹಳ್ಳಿ ಕೆರೆ ಪುನರುಜ್ಜೀವನ ಯೋಜನೆ ಕೈಗೊಳ್ಳಲಾಗಿದೆ. ಇನ್ನು 2023ರ ವೇಳೆಗೆ ನಗರದಲ್ಲಿ ಒಟ್ಟು 1713.5 ಎಂ.ಎಲ್.ಡಿ., ತ್ಯಾಜ್ಯ ನೀರನ್ನು ಸಂಸ್ಕರಿಸಬಹುದಾಗಿರುತ್ತದೆ. ಈ ಸಂಸ್ಕರಿಸಿದ ನೀರಿನಲ್ಲಿ ಶೇ.50ರಷ್ಟನ್ನು ಬೆಂಗಳೂರಿನ ಹೊರಭಾಗದಲ್ಲಿರುವ ನಗರಗಳ ಕೆರೆಗಳನ್ನು ತುಂಬಿಸಲಾಗುವುದು,
ಉಳಿದ ಶೇ.50ರಷ್ಟು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬೆಂಗಳೂರಿನಲ್ಲಿರುವ ಕೈಗಾರಿಕೆ, ವಾಣಿಜ್ಯ ಮತ್ತು ಗೃಹ ಬಳಕೆದಾರರ ಇತರೆ ಬಳಕೆಯ ಬೇಡಿಕೆಯನ್ನು ಪೂರೈಸಲು, ಉದ್ಯಾನವನದಲ್ಲಿನ ಗಿಡಗಳಿಗೆ ನೀರುಣಿಸಲು ಹಾಗೂ ಸಮುದಾಯ ಭವನಗಳ ಉಪಯೋಗಗಳಿಗೆ ಬಳಸಲಾಗುತ್ತದೆ. ಇದಲ್ಲದೇ ಬೆಂಗಳೂರಿನ ನಾಗರಿಕರಿಗೆ ಸಹ ಕಟ್ಟಡಗಳಿಗೆ ಮಳೆನೀರು ಕೊಯ್ಲು, ತ್ಯಾಜ್ಯ ಸಂಸ್ಕರಣ ಘಟಕ ಅಳವಡಿಕೆ ಮಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಲಮಂಡಳಿ ತಿಳಿಸಿದೆ.
ಡ್ಯಾಂಗಳಲ್ಲಿ ನೀರಿನ ಸಂಗ್ರಹ ತೃಪ್ತಿಕರ: ಸದ್ಯ ಕೃಷ್ಣರಾಜ ಅಣೆಕಟ್ಟೆ ಮತ್ತು ಕಬಿನಿ ಅಣೆಕಟ್ಟೆಯಲ್ಲಿ ನೀರಿನ ಶೇಖರಣೆಯ ಪ್ರಮಾಣವು ತೃಪ್ತಿಕರವಾಗಿದ್ದು, ಬೇಸಿಗೆ ಹಾಗೂ ಬರದಿಂದಾಗಿ ನಗರದಲ್ಲಿ ನೀರಿನ ಕೊರತೆ ಉಂಟಾಗಿರುವುದಿಲ್ಲ. ಇನ್ನು ಜೂನ್ ಪ್ರಾರಂಭಿಕ ವಾರದಲ್ಲಿ ಮುಂಗಾರು ಮಳೆಯ ಮುನ್ಸೂಚ ಇದ್ದು ಮತ್ತೆ ನೀರಿನ ಶೇಖರಣೆ ಹೆಚ್ಚಲಿದೆ.
ಸದ್ಯ ಜಲಮಂಡಲಿಯು ಬಿಬಿಎಂಪಿ ವ್ಯಾಪ್ತಿಯ ಸುಮಾರು ಒಂದು ಕೋಟಿ ಜನರಿಗೆ ನೀರನ್ನು ಪೂರೈಸುತ್ತಿದ್ದು, 2007ರಲ್ಲಿ ಹೊಸದಾಗಿ ಬಿಬಿಎಂಪಿಗೆ ಸೇರಿದ 110 ಹಳ್ಳಿಗಳಿಗೆ ನೀರು ಸರಬರಾಜು ಸೌಲಭ್ಯವನ್ನು ಒದಗಿಸುವ ಕಾಮಗಾರಿಯು ಪ್ರಗತಿಯಲ್ಲಿದ್ದು 2019 ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.