Advertisement

ಕಾಂಗ್ರೆಸ್ ನಲ್ಲಿದ್ದ 22 ವರ್ಷ ವ್ಯರ್ಥ…ಬಿಜೆಪಿಯಲ್ಲಿ ನಾವು ದೇಶವನ್ನು ಪೂಜಿಸುತ್ತೇವೆ: ಅಸ್ಸಾಂ ಸಿಎಂ

10:41 AM Dec 02, 2022 | Team Udayavani |

ಗುವಾಹಟಿ(ಅಸ್ಸಾಂ):ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿರುವುದು ಯಾವುದೇ ಸೈದ್ಧಾಂತಿಕ ಬದಲಾವಣೆಯ ಉದ್ದೇಶವಾಗಿರಲಿಲ್ಲ. ಆದರೆ ನಾನು ನನ್ನ ಜೀವನದ 22 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದಿದ್ದು ವ್ಯರ್ಥ ಎನಿಸಿದೆ ಎಂಬುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ತೆರಗೆ ಬಂತು ದಿಗಂತ್- ಅನಂತ್ ನಾಗ್ ಅಭಿನಯದ “ತಿಮ್ಮಯ್ಯ ಅಂಡ್‌ ತಿಮ್ಮಯ್ಯ”

ಕಾಂಗ್ರೆಸ್ ಪಕ್ಷದಲ್ಲಿ ನಾವು ಒಂದು ಕುಟುಂಬವನ್ನು ಪೂಜಿಸಲು ಬಳಕೆಯಾಗುತ್ತೇವೆ, ಬಿಜೆಪಿಯಲ್ಲಿ ನಾವು ದೇಶವನ್ನು ಪೂಜಿಸುತ್ತೇವೆ ಎಂದು ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಶರ್ಮಾ ಅಸ್ಸಾಂನಲ್ಲಿ ಕಾಂಗ್ರೆಸ್ ನಲ್ಲಿ ಸಚಿವರಾಗಿದ್ದರು. 2015ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸಚಿವರಾಗಿ ಕಾರ್ಯನಿರ್ವಹಿಸಿದ್ದ ಹಿಮಂತ್ ಬಿಸ್ವಾ ಇಂದು ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ.

ಸಂದರ್ಶನದಲ್ಲಿ ಹಿಮಂತ್, ಗಲಭೆ, ಮತಾಂತರ, ಹಿಂದು ಯುವತಿಯರ ದುರಂತ ಅಂತ್ಯ, ಇನ್ನಿತರ ಅಪರಾಧ ಕೃತ್ಯಗಳ ಕುರಿತು ಬಿಜೆಪಿಯ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಎಲ್ಲಾ ಸಮುದಾಯಗಳಲ್ಲಿ ಇದೇ ರೀತಿಯ ಅಪರಾಧಗಳು ವರದಿಯಾದರೆ ಯಾವ ಆಧಾರದ ಮೇಲೆ ಶಿಕ್ಷೆ ಕೊಡುವ ಬಗ್ಗೆ ತೀರ್ಮಾನಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಸ್ವಾಸ್, ಪ್ರೀತಿಸಿ ಮತಾಂತರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ವ್ಯಾಖ್ಯಾನಿಸುವ ಸಮಯ ಬಂದಿದೆ. ಈ ಬಗ್ಗೆ ನಮ್ಮ ರಾಜ್ಯಗಳಲ್ಲಿ ಹಲವಾರು ಸಾಕ್ಷ್ಯಗಳಿವೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next