Advertisement
ಹೌದು.. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಇತ್ತೀಚಿಗೆ ತ್ಯಾಜ್ಯ ಮುಕ್ತ ನಗರಗಳನ್ನಾಗಿಮಾಡಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ನಗರಗಳು ಸ್ವತ್ಛಂದವಾಗಿದ್ದರೆ ನೈರ್ಮಲಿಕರಣ, ಆರೋಗ್ಯ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜನರಲ್ಲಿಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ನಗರಸಭೆ,ಪುರಸಭೆ, ಪಪಂಗಳ ವ್ಯಾಪ್ತಿಯಲ್ಲಿ ಈಗಾಗಲೇ ಘನತ್ಯಾಜ್ಯ ವಿಲೇವಾರಿ ಘಟಕಗಳುಕಾರ್ಯ ನಿರ್ವಹಿಸುತ್ತಿವೆ. ನಗರದಿಂದ ಉತ್ಪತ್ತಿಯಾಗುವ ಕಸಗಳನ್ನು ಬೇರ್ಪಡಿಸುವ ಕೆಲಸವೂ ನಡೆಯುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂತಹ ವ್ಯವಸ್ಥೆ ಇಲ್ಲ. ತಾಲೂಕಿನ ಹೊಸಳ್ಳಿ ಬಳಿಯ ಬಹುಗ್ರಾಮ ಘನ ತ್ಯಾಜ್ಯವಿಲೇವಾರಿ ಘಟಕ ಹೊರತುಪಡಿಸಿದರೆ ಯಾವುದೇ ಗ್ರಾಪಂನಲ್ಲಿ ಘಟಕ ಇಲ್ಲ.
Related Articles
Advertisement
ಟ್ರ್ಯಾಕ್ಟರ್, ಮಿನಿ ಟಿಪ್ಪರ್ ಖರೀದಿ:
ಎಸ್‌ಬಿಎಂನ ಅನುದಾನ ಹಾಗೂ ಗ್ರಾಪಂ ಸ್ಥಳೀಯ ಅನುದಾನದಲ್ಲಿ ಮನೆ ಮನೆಗೆಕಸ ಸಂಗ್ರಹಿಸುವ ವಾಹನ ಖರೀದಿಸಲು ಜಿಪಂ ಯೋಜನೆ ರೂಪಿಸಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ಗ್ರಾಪಂನಲ್ಲಿ ಟ್ರ್ಯಾಕ್ಟರ್ ಕಡಿಮೆ ಜನಸಂಖ್ಯೆ ಇರುವ ಗ್ರಾಪಂನಲ್ಲಿ ಮಿನಿ ಟಿಪ್ಪರ್ ಸೇರಿ ಹೀಗೆ ಅಗತ್ಯಕ್ಕೆ ತಕ್ಕಂತೆ ವಾಹನ ಖರೀದಿಸಿ ಕಸ ಸಂಗ್ರಹಣೆ ಮಾಡಿ ತ್ಯಾಜ್ಯ ಘಟಕದಲ್ಲಿ ಕಸವನ್ನು ಇರಿಸಿಅದನ್ನು ಬೇರ್ಪಡಿಸಿ ಅದರಿಂದ ಬರುವಗೊಬ್ಬರವನ್ನು ಸ್ಥಳೀಯವಾಗಿಯೇ ರೈತರಿಗೆಪೂರೈಕೆ ಮಾಡಿ ಆಯಾ ಗ್ರಾಪಂಗಳೇ ಘಟಕದ ನಿರ್ವಹಣೆಯ ಜವಾಬ್ದಾರಿ ನೋಡಿಕೊಳ್ಳುವ ಹೊಣೆ ನೀಡಲಾಗಿದೆ.
ಈಗಾಗಲೇ ತಾಲೂಕಿನ ಹೊಸಳ್ಳಿ ಬಳಿ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿಘಟಕವು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು,ಹಲವು ಜಿಲ್ಲೆಗಳ ಜಿಪಂ, ತಾಪಂ ಹಾಗೂಗ್ರಾಪಂ ಸದಸ್ಯರು ಈ ಘಟಕ್ಕೆ ಭೇಟಿ ನೀಡಿಇಲ್ಲಿನ ವ್ಯವಸ್ಥೆ, ನಿರ್ವಹಣೆಯ ವಿಧಾನ ಹಾಗೂ ಕಸ ಬೇರ್ಪಡಿಸುವ ವಿಧಾನವನ್ನು ಅರಿತು ತಮ್ಮ ತಮ್ಮ ಜಿಲ್ಲೆಗಳಲ್ಲಿ ಈ ಮಾದರಿಯನ್ನು ಅನುಕರಣೆ ಮಾಡುತ್ತಿದ್ದು,ಕೊಪ್ಪಳ ಜಿಲ್ಲೆಯೂ ಉಳಿದ ಗ್ರಾಪಂನಲ್ಲಿಇಂತಹ ಘನತ್ಯಾಜ್ಯ ವಿಲೇವಾರಿ ಘಟಕಆರಂಭಕ್ಕೆ ಅಸ್ತು ಎಂದಿರುವುದು ಗಮನಾರ್ಹ ವಿಷಯವಾಗಿದೆ.
ಪ್ರತಿ ಹಳ್ಳಿಗಳು ಸ್ವಚ್ಛವಾಗಿದ್ದರೆ ರೋಗರುಜಿನ ನಿಯಂತ್ರಣಕ್ಕೆ ಬರಲಿವೆ. ಜಿಪಂಅಂದುಕೊಂಡಂತೆ ಗ್ರಾಪಂನ ತ್ಯಾಜ್ಯನಿರ್ವಹಣಾ ಘಟಕದ ಮೇಲೆ ನಿಗಾಇರಿಸಿದರೆ ಮಾತ್ರ ಘಟಕಗಳು ತಲೆ ಎತ್ತಲಿವೆ.ಇಲ್ಲದಿದ್ದರೆ ಹಳ್ಳಿಗಳು ಮತ್ತೆ ಕಸದಿಂದ ಗಬ್ಬೆದ್ದು ನಾರಲಿವೆ.
ಜಿಲ್ಲೆಯ 115 ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಕ್ಕೆ ಜಿಪಂನಿಂದ ಅನುಮತಿ ನೀಡಲಾಗಿದೆ. ಸರ್ಕಾರಿ ಜಮೀನಿನಲ್ಲಿ ಘಟಕ ಆರಂಭಿಸಲಾಗುವುದು.ಎಸ್‌ಬಿಎಂ ಅನುದಾನದಲ್ಲಿ ಘಟಕಕ್ಕೆ ಬೇಕಾದ ಸೌಲಭ್ಯ ಕಲ್ಪಿಸುವ ವ್ಯವಸ್ಥೆಮಾಡಲಾಗುವುದು. ಕಸ ಸಂಗ್ರಹಣೆಗೆ ಮಿನಿ ವಾಹನಖರೀದಿಸಲು ಸೂಚಿಸಲಾಗಿದೆ.ಉಳಿದ ಗ್ರಾಪಂನಲ್ಲಿ 2-3 ಗ್ರಾಪಂನಲ್ಲಿ ಕ್ಲಸ್ಟರ್ ಮಾಡಿ ಜಾಗದ ವ್ಯವಸ್ಥೆ ಮಾಡಿ ಘಟಕ ಆರಂಭಕ್ಕೆ ಒತ್ತು ನೀಡಲಾಗುವುದು.–ಟಿ. ಕೃಷ್ಣಮೂರ್ತಿ, ಜಿಪಂ ಯೋಜನಾ ನಿರ್ದೇಶಕರು, ಕೊಪ್ಪಳ
–ದತ್ತು ಕಮ್ಮಾರ