Advertisement

Kinnigoli: ಅಂಗರಗುಡ್ಡೆ – ಶಿಮಂತೂರು ರಸ್ತೆ ಪಕ್ಕ ತಾಜ್ಯ ರಾಶಿ

01:25 PM Dec 11, 2024 | Team Udayavani |

ಕಿನ್ನಿಗೋಳಿ: ಮೂಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಗೆ ಕೂಡು ರಸ್ತೆಯಾದ ಅಂಗರಗುಡ್ಡೆ ಶಿಮಂತೂರು ರಸ್ತೆಯ ಕೆಲವು ಕಡೆಗಳಲ್ಲಿ ದುರ್ನಾತ ಬೀರುವ ಕಸ, ತಾಜ್ಯ ರಾಶಿ ಅಸ ಹ್ಯವೆನಿಸುತ್ತಿದ್ದು ಕಸ ಹಾಗೂ ತ್ಯಾಜ್ಯ ವಿಲೇವಾರಿ ಆಗದೆ ಸಮಸ್ಯೆ ಉಂಟಾಗಿದೆ.

Advertisement

ಅಂಗರಗುಡ್ಡೆ ಪರಿಸರವು ಸ್ವಲ್ಪ ಭಾಗ ಕಿನ್ನಿಗೋಳಿ ಪಟ್ಟಣ ಪಂಚಾಯತ್‌, ಇನ್ನು ಕೆಲವು ಭಾಗ ಕಿಲ್ಪಾಡಿ ಗ್ರಾಮ ಪಂಚಾಯತ್‌ ಹಾಗೂ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್‌ ಹಂಚಿಕೊಂಡಿದೆ.
ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಕಸ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಅಷ್ಟು ಸಮಪರ್ಕವಾಗಿ ನಡೆಯುತ್ತಿಲ್ಲ. ಪಟ್ಟಣ ಪಂಚಾಯತ್‌ ವ್ಯಾಪ್ತಿ ಯಲ್ಲಿ ವ್ಯವಸ್ಥಿತ ವಾಗಿ ಪ್ರತಿ ದಿನ ಕಸ, ತಾಜ್ಯ ಸಂಗ್ರಹ ಹಾಗೂ ವಿಲೇವಾರಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವಾರಕ್ಕೆ ಒಂದು ತಾಜ್ಯ ಸಂಗ್ರಹ ನಡೆಯತ್ತಿದೆ.

ನಾಯಿ, ಕಾಗೆ, ಚಿರತೆಗಳಿಗೆ ಆಹಾರ ತಾಣ
ರಾಶಿ ತಾಜ್ಯಯಿಂದ ನಾಯಿ, ಕಾಗೆ ಹಾಗೂ ರಾತ್ರಿಯ ಹೊತ್ತಿನಲ್ಲಿ ಚಿರತೆಗೂ ಆಹಾರ ದೊರೆತ್ತಿದೆ. ಕಸದಲ್ಲಿ ಊಟಮಾಡಿದ ಎಲೆ ಹಾಗೂ ಕೋಳಿ, ಮೀನು ಮಾಂಸದ ತಾಜ್ಯಗಳು ಇದ್ದು ಇದಕ್ಕೆ ಕಾಗೆ, ನಾಯಿಗಳು ಮುಗಿ ಬೀಳುತ್ತದೆ.

ಸಾಂಕ್ರಮಿಕ ರೋಗದ ಬೀತಿ
ಶಿಮಂತೂರು ಪ್ರಮೀಳಾ ನಿವಾಸದ ಹತ್ತಿರ ಹೋಗುವ ಮೋರಿ ಸಮೀಪ ಕೊಳೆತ ವಸ್ತುಗಳು ತಂದು ಬಿಸಾಡಿ ಹೋಗುತ್ತಿದ್ದು ಇದರಿಂದ ಸಾಂಕ್ರಮಿಕ ರೋಗ ಹರಡುವ ಬೀತಿ ಇದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಜಗದೀಶ. ಸ್ಥಳೀಯ ಗ್ರಾಮ ಪಂಚಾಯತ್‌, ಪಟ್ಟಣ ಪಂಚಾಯತ್‌ ತುರ್ತು ಸ್ಪಂದಿಸಿ ಈ ಭಾಗದಲ್ಲಿ ಸಿಸಿ ಕೆಮರಾ, ಸೂಚನಾ ಫಲಕ ಅಳವಡಿಸಿ ಕ್ರಮ ತೆಗೆದುಕೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next