Advertisement

ತ್ಯಾಜ್ಯ ನಿರ್ವಹಣಾ ಘಟಕ ಪರಿಶೀಲನೆ

02:20 PM Feb 07, 2021 | Adarsha |

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯ 14 ಹಾಗೂ 22 ವಾರ್ಡ್‌ನಲ್ಲಿ ರುವ ವಿಕೇಂದ್ರಿಕೃತ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣ ಹಂತದ ಕಾಮಗಾರಿ ಸ್ಥಳಗಳಿಗೆ ಶನಿವಾರ ಭೇಟಿ ನೀಡಿದ ಡಿಸಿ ಪಿ.ಸುನೀಲಕುಮಾರ ಪರಿಶೀಲನೆ ನಡೆಸಿದರು.

Advertisement

ವಾರ್ಡ್‌ ನಂ. 14ರಲ್ಲಿನ ಡಾಲರ್ಸ್‌ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಕೇಂದ್ರಿಕೃತ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸಂಬಂಧಪಟ್ಟ ಅ ಧಿಕಾರಿಗಳಿಗೆ ಸೂಚಿಸಿದರು. ವಾರ್ಡ್‌ ನಂ. 22ರಲ್ಲಿ ನಿರ್ಮಿಸಿರುವ ವಿಕೇಂದ್ರಿಕೃತ ತ್ಯಾಜ್ಯ ನಿರ್ವಹಣಾ ಘಟಕ ಪರಿಶೀಲಿಸಿದ ಡಿಸಿ ಸುನಿಲಕುಮಾರ, ಘಟಕವನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಜೊತೆಗೆ ಅಧಿಕೃತ ಪ್ರಯೋಗಾಲಯದಿಂದ ವರದಿ ಪಡೆದು ಗೊಬ್ಬರ ಮಾರಾಟ ಮಾಡುವಂತೆ ಸೂಚನೆ ನೀಡಿದರು.

ಇದನ್ನೂ ಓದಿ:2ನೇ ಹಂತದಲಿ ಕೊರೊನಾ ಲಸಿಕೆ ನೀಡಲು ಸಿದ್ಧತೆ

ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಡಿ.ಎಚ್‌. ಕಿರೇಸೂರ, ಡಿಯುಡಿಸಿ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಎಸ್‌. ಎಸ್‌. ಸುರ್ಖಿ, ಪರಿಸರ ಅಭಿಯಂತರ ಡಾ| ಪ್ರಕಾಶ ಗೂಳಪ್ಪಗೊಳ ಸೇರಿದಂತೆ ಪಾಲಿಕೆಯ ಇತರೆ ಅಧಿಕಾರಿ-ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next