Advertisement
ರಾಜಕಾಲುವೆಯ ಬಳಿ ಇರುವ ಮನೆಗಳು ಕಾಲುವೆ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದು ಈ ಸಮಸ್ಯೆ ಬೆಳೆಯಲು ಮುಖ್ಯ ಕಾರಣ.
Related Articles
Advertisement
ಒಳಚರಂಡಿ ನಿರ್ಮಾಣವಾಗಲಿ
ಮೂಲ್ಕಿಯಲ್ಲಿ ಒಳ ಚರಂಡಿ ವ್ಯವಸ್ಥೆ ಕೆಲವು ತಾಂತ್ರಿಕ ಕಾರಣಗಳಿಂದ ಇನ್ನೂ ಪೂರ್ಣಗೊಳ್ಳುವ ಹಂತಕ್ಕೆ ಬಂದಂತಿಲ್ಲ. ಬಹು ಮಹಡಿಯ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳು ಬೆಳೆದು ನಿಂತಿವೆ. ಇಲ್ಲಿಗೆ ಅತೀ ಅಗತ್ಯವಾಗಿರುವ ಒಳಚರಂಡಿ ವ್ಯವಸ್ಥೆ ನಿರ್ಮಾಣವಾಗಿ ನೀರು ಹರಿಯಲಾರಂಭಿಸಿದರೆ ಮಾತ್ರ ಮೂಲ್ಕಿಯ ಜನರು ನೆಮ್ಮದಿಯಿಂದ ಇರಲು ಸಾಧ್ಯ.
ಈಗಾಗಲೇ ಚರಂಡಿಯ ಕಾಮಗಾರಿಯನ್ನು ಆರಂಭಿ ಸಿರುವ ನಗರ ಪಂಚಾಯತ್ ಗೆ ಸವಾಲಾಗಿರುವುದು ಜನರು ಕಸ ಕಡ್ಡಿ ಅಥವಾ ಕಟ್ಟಡ ತ್ಯಾಜ್ಯವನ್ನು ರಸ್ತೆ ಬದಿಗೆ ಸುರಿಯುವುದು ಮತ್ತು ಚರಂಡಿ ಸರಿಪಡಿಸಲು ಮರೆತು ಹೋಗಿರುವುದು. ನಗರ ಪಂಚಾಯತ್‌ನ ಜತೆಗೆ ಸಾರ್ವಜನಿಕರು ಚರಂಡಿ ಸಮಸ್ಯೆ ಬಿಗಡಾಯಿಸದಂತೆ ಸಹಕರಿಸುವುದು ಅತೀ ಅಗತ್ಯವಾಗಿದೆ. ಈಗಾಗಲೇ ಕೆಲವೆಡೆ ರಸ್ತೆ ಬದಿಯಲ್ಲಿ ಕಟ್ಟಡ ಸಾಮಗ್ರಿ ಸಂಗ್ರಹಿಸಿರುವುದನ್ನು ತೆರವುಗೊಳಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸವನ್ನು ಕೂಡ ನಗರ ಪಂಚಾಯತ್ ಮಾಡಿದೆ. ಈಗಾಗಲೇ ನಗರ ಪಂಚಾಯತ್ ವ್ಯಾಪ್ತಿಯ ಹೆಚ್ಚಿನ ರಸ್ತೆಗಳ ಚರಂಡಿಗಳ ಸ್ವತ್ಛತೆಯ ಕೆಲಸವನ್ನು ಆರಂಭಿಸಲಾಗಿದೆ. ಇತರ ಹಲವೆಡೆ ತೋಡುಗಳನ್ನು ಸರಿಪಡಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕಿದೆ.
ಸೂಕ್ತ ಕ್ರಮ
ಸಾರ್ವಜನಿಕರು ಕಾಲುವೆಯ ಜಾಗವನ್ನು ಅತಿಕ್ರಮಿಸಿದರೆ ಸೂಕ್ತ ಕ್ರಮ ಜರಗಿಸಿ ತೆರವುಗೊಳಿಸಲು ಮುಂದಾಗುತ್ತೇವೆ. ಒಂದು ವೇಳೆ ಚರಂಡಿಯಲ್ಲಿ ನೀರು ಹರಿದು ಹೋಗಲು ಅಗತ್ಯ ಇರುವ ಜಾಗ ಯಾರದೇ ಆಗಿದ್ದರೂ ಅದನ್ನು ಸಾರ್ವಜನಿಕ ಉದ್ದೇಶಕ್ಕಾಗಿ ವಶಪಡಿಸಿಕೊಳ್ಳುವ ನಿಯಮವನ್ನು ಕೂಡ ನಗರ ಪಂಚಾಯತ್ ಬಳಸಿಕೊಳ್ಳಲು ಸಾಧ್ಯವಿದೆ. –ಪಿ. ಚಂದ್ರ ಪೂಜಾರಿ, ಮುಖ್ಯಾಧಿಕಾರಿ, ಮೂಲ್ಕಿ ನಗರ ಪಂಚಾಯತ್