ಅಹಮದಾಬಾದ್ : ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಶುಕ್ರವಾರ ಆರಂಭವಾಗಿದೆ. ಅಹಮದಾಬಾದ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ ಸೋಲನುಭವಿಸಿದೆ. ಈ ಸರಣಿಯುದ್ದಕ್ಕೂ ಟೀಂ ಇಂಡಿಯಾವನ್ನು ಟೀಕಿಸುತ್ತಿರುವ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ನಿನ್ನೆಯೂ ನಾಲಿಗೆ ಹರಿಬಿಟ್ಟಿದ್ದು, ಇದಕ್ಕೆ ವಾಸೀಂ ಜಾಫರ್ ತಕ್ಕ ತಿರುಗೇಟು ನೀಡಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲಿಲ್ಲ. ತಂಡ 20 ಓವರ್ ಗಳಲ್ಲಿ ಗಳಿಸಿದ್ದು ಕೇವಲ 124 ರನ್ ಮಾತ್ರ. ಇದಕ್ಕೆ ವ್ಯಂಗ್ಯವಾಡಿದ ವಾನ್, “ಟೀಂ ಇಂಡಿಯಾಕ್ಕಿಂತ ಮುಂಬೈ ಇಂಡಿಯನ್ಸ್ ತಂಡ ಉತ್ತಮವಾಗಿದೆ’ ಎಂದು ಟ್ವೀಟದ ಮಾಡಿದ್ದರು.
ವಾನ್ ಟೀಕೆಗೆ ಪ್ರತಿಕ್ರಿಯೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ ವಾಸೀಂ ಜಾಫರ್, ಎಲ್ಲಾ ತಂಡಗಳೂ ನಾಲ್ಕು ವಿದೇಶಿ ಆಟಗಾರರನ್ನು ಆಡಿಸುವಷ್ಟು ಅದೃಷ್ಟ ಹೊಂದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.
ಇಂಗ್ಲೆಂಡ್ ತಂಡದಲ್ಲಿ ಆರು ಮಂದಿ ಆಟಗಾರರು ವಿದೇಶಿಗರಾಗಿದ್ದಾರೆ. ನಾಯಕ ಇಯಾನ್ ಮಾರ್ಗನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್, ಜೇಸನ್ ರಾಯ್ ಮತ್ತು ಬೆನ್ ಸ್ಟೋಕ್ಸ್ ಬೇರೆ ದೇಶವರಾದರೂ ಇಂಗ್ಲೆಂಡ್ ಪರ ಆಡುತ್ತಾರೆ.
ಮೊದಲ ಟಿ20 ಪಂದ್ಯದಲ್ಲಿ ನಾಯಕ ವಿರಾಟ್, ರಾಹುಲ್ ಧವನ್ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಮುಳುವಾಯಿತು. ಭಾರತ ತಂಡ ನೀಡಿದ 125 ರನ್ ಗುರಿಯನ್ನು ಇಂಗ್ಲೆಂಡ್ ಕೇವಲ 15.3 ಓವರ್ ನಲ್ಲಿ ತಲುಪಿತು.