Advertisement

ಚೀನಾದ ಅಮಿತ್‌ ಶಾ “ವಾಂಗ್‌’

11:20 AM Mar 13, 2018 | Team Udayavani |

ಬೀಜಿಂಗ್‌: ಚೀನಾ ಅಧ್ಯಕ್ಷರ ಅಧಿಕಾರಾವಧಿಯ ಮಿತಿಯನ್ನು ತೆಗೆದು ಹಾಕುವಂಥ ಮಹತ್ವದ ಹೆಜ್ಜೆಯ ಹಿಂದೆ ವಾಂಗ್‌ ಹುನಿಂಗ್‌ ಎಂಬ ರಾಜಕೀಯ ತಜ್ಞರೊಬ್ಬರ ತಂತ್ರಗಾರಿಕೆ ಇದೆಯೆಂದು ಹಲವಾರು ಮಾಧ್ಯಮಗಳು ಅಭಿಪ್ರಾಯಪಟ್ಟಿದ್ದು, ಅವರನ್ನೀಗ ಚೀನಾದ “ಅಮಿತ್‌ ಶಾ’ ಎಂದು ಬಣ್ಣಿಸಲಾಗಿದೆ. ದೈನಿಕವೊಂದರಲ್ಲಿ ತಾವು ಬರೆದ ಲೇಖನವೊಂದರಲ್ಲಿ ದೆಹಲಿಯ “ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಚೈನೀಸ್‌ ಸ್ಟಡೀಸ್‌’ನ ಜಬಿನ್‌ ಟಿ. ಜಾಕೋಬ್‌ ಎಂಬುವರು ವಾಂಗ್‌
ಹುನಿಂಗ್‌ ಅವರನ್ನು ಹೀಗೆ ಬಣ್ಣಿಸಿದ್ದಾರೆ. ಹಿಂದೊಮ್ಮೆ ಉಪನ್ಯಾಸಕರಾಗಿ, ಆನಂತರ ರಾಜಕಾರಣಿಯಾಗಿ ಬದಲಾದ ವಾಂಗ್‌, ಇದೀಗ, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಅಮಿತ್‌ ಶಾ ಅವರು ಆಪ್ತ ಸಲಹೆಗಾರರಾಗಿ ಆಸರೆಯಾಗಿರುವ ರೀತಿಯಲ್ಲೇ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ವಾಂಗ್‌ ಹುನಿಂಗ್‌ ಆಪ್ತ ಸಲಹೆಗಾರರಾಗಿದ್ದಾರೆ ಎಂದು ಹೇಳಿದ್ದಾರೆ.

Advertisement

ಜಿನ್‌ಪಿಂಗ್‌ ಅವರಿಗಷ್ಟೇ ಅಲ್ಲ, ಈ ಹಿಂದಿನ ಅಧ್ಯಕ್ಷರಾದ ಜಿಯಾಂಗ್‌ ಜೆಮಿನ್ಸ್‌ ಅವರ “ಥಿಯರಿ ಆಫ್ ತ್ರೀ ರೆಪ್ರಸೆಂಟೇಟಿವ್ಸ್‌’ ಹಾಗೂ ಹು ಜಿಂಟಾವೊ ಅವರ “”ಸೈಂಟಿμಕ್‌ ಥಿಯರಿ ಆಫ್ ಡೆವೆಲಪ್‌ಮೆಂಟ್‌” ಎಂಬ ರಾಜಕೀಯ
ಸಿದ್ಧಾಂತಗಳ ಹಿಂದೆ ಇದೇ ವಾಂಗ್‌ ಹುನಿಂಗ್‌ ಬುದ್ಧಿಮತ್ತೆ ಕೆಲಸ ಮಾಡಿತ್ತೆಂದು ಹೇಳಲಾಗಿದ್ದು, ಇದೀಗ, ಕ್ಸಿ ಜಿನ್‌ಪಿಂಗ್‌ ಅವರ ಯಶಸ್ಸಿಗೂ ಹುನಿಂಗ್‌ ಅವರೇ ಕಾರಣ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next