Advertisement

Pakistan ಆಯ್ಕೆ ಸಮಿತಿಯಿಂದ ರಿಯಾಜ್‌, ರಜಾಕ್‌ ವಜಾ

01:49 AM Jul 11, 2024 | Team Udayavani |

ಲಾಹೋರ್‌: ಟಿ20 ವಿಶ್ವಕಪ್‌ ವೈಫ‌ಲ್ಯದ ಬೆನ್ನಲ್ಲೇ ಪಾಕಿಸ್ಥಾನ ಆಯ್ಕೆ ಸಮಿತಿಯಿಂದ ಇಬ್ಬರನ್ನು ವಜಾಗೊಳಿಸಲಾಗಿದೆ. ಇವರೆಂದರೆ ವಹಾಬ್‌ ರಿಯಾಜ್‌ ಮತ್ತು ಅಬ್ದುಲ್‌ ರಜಾಕ್‌. ಇವರಿಬ್ಬರೂ 7 ಸದಸ್ಯರ ಪಾಕ್‌ ಆಯ್ಕೆ ಸಮಿತಿಯಲ್ಲಿದ್ದರು.

Advertisement

ಈ ಆಯ್ಕೆ ಸಮಿತಿಯೇ ಪಾಕಿಸ್ಥಾನದ ಟಿ20 ವಿಶ್ವಕಪ್‌ ತಂಡವನ್ನು ಆರಿಸಿತ್ತು. ನಿವೃತ್ತಿಯಿಂದ ಹೊರಬಂದ ಇಮಾದ್‌ ವಾಸಿಮ್‌ ಮತ್ತು ಮೊಹಮ್ಮದ್‌ ಆಮೀರ್‌ ಅವರಿಗೆ ಇಲ್ಲಿ ಮಣೆ ಹಾಕಲಾಗಿತ್ತು. ಈ ಆಯ್ಕೆ ಎಲ್ಲ ಕಡೆಯಿಂದ ಟೀಕೆಗೊಳಗಾಯಿತು. ಇದಕ್ಕೆ ಸರಿಯಾಗಿ ಪಾಕ್‌ ಲೀಗ್‌ ಹಂತದಲ್ಲೇ ಗಂಟುಮೂಟೆ ಕಟ್ಟಿತು. ಪಿಸಿಬಿಯ ಆಂತರಿಕ ವಿಚಾರಣ ಸಮಿತಿಯು ಆಯ್ಕೆಗಾರರ ಸಾಕಷ್ಟು ದೋಷಗಳನ್ನು ಪಟ್ಟಿ ಮಾಡಿತ್ತು.

ಉಚ್ಚಾಟಿತ ವಹಾಬ್‌ ರಿಯಾಜ್‌ ಮತ್ತು ಅಬ್ದುಲ್‌ ರಜಾಕ್‌ ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ಲೆಜೆಂಡ್ಸ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುವ ಮೂಲಕವೂ ಪಿಸಿಬಿಯ ಕೆಂಗಣ್ಣಿಗೆ ಗುರಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next