Advertisement

BCCI: ಕ್ರಿಕೆಟ್‌ ಆಯ್ಕೆ ಸಮಿತಿಗೆ ಅಜಯ್‌ ರಾತ್ರಾ ಪ್ರವೇಶ

09:24 PM Sep 03, 2024 | Team Udayavani |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್‌ ಕೀಪರ್‌ ಅಜಯ್‌ ರಾತ್ರಾ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

Advertisement

5 ಸದಸ್ಯರ ಸಮಿತಿಯಲ್ಲಿ ಅವರು ಸಲಿಲ್‌ ಅಂಕೋಲಾ ಸ್ಥಾನವನ್ನು ತುಂಬಲಿದ್ದು, ಉತ್ತರ ವಲಯವನ್ನು ಪ್ರತಿನಿಧಿಸಲಿದ್ದಾರೆ. ಅಜಿತ್‌ ಅಗರ್ಕರ್‌ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಕಾರಣ, ಸಮಿತಿಯು ಪಶ್ಚಿಮ ವಲಯದ ಇಬ್ಬರು ಸದಸ್ಯರನ್ನು ಹೊಂದಿದಂತಾಗಿದೆ.

ಇದೊಂದು ಮಹಾನ್‌ ಗೌರವ ಮತ್ತು ಸವಾಲು. ಭಾರತೀಯ ಕ್ರಿಕೆಟಿಗೆ ಸೇವೆ ಸಲ್ಲಿಸುವುದನ್ನು ನಾನು ಈ ಮೂಲಕ ಮುಂದುವರಿಸುತ್ತೇನೆ’ ಎಂಬುದಾಗಿ ಅಜಯ್‌ ರಾತ್ರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next