ಇಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು (ರಾಜ್ಯ ಸರಕಾರ) ಯಾಕೆ ಹೇಮಾ ಸಮಿತಿ ವರದಿ ಬಿಡುಗಡೆ ಮಾಡುತ್ತಿಲ್ಲ. ಬಿಡುಗಡೆ ಮಾಡದಂತೆ ನಿಮ್ಮನ್ನು ತಡೆಯುತ್ತಿರುವುದೇನು?, ನೀವು ಇದರ ಭಾಗವಾಗಿರುವ ಕಾರಣದಿಂದಲೇ ಬಿಡುಗಡೆಗೆ ಹಿಂಜರಿಯುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಎಲ್‌ಡಿಎಫ್, ಯುಡಿಎಫ್ ಪಕ್ಷಗಳು ರಾಜ್ಯವನ್ನು ಹಾಳು ಮಾಡುತ್ತಿವೆ. ಇವೆರಡು ಒಂದೇ ನಾಣ್ಯದ 2 ಮುಖಗಳು ಎಂದಿದ್ದಾರೆ.
Advertisement
ನಡ್ಡಾ-ಭಾಗವತ್ ಭೇಟಿ: ಕುತೂಹಲರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಮಾಡಿದ್ದಾರೆ. ಇಬ್ಬರು ನಾಯಕರು ಸುಮಾರು 30 ನಿಮಿಷ ಸಭೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಆರ್‌ಎಸ್‌ಎಸ್‌ನ ಅಗತ್ಯವಿಲ್ಲ ಎಂದು ನಡ್ಡಾ ಹೇಳಿದ ಬಳಿಕ ಮೊದಲ ಭೇಟಿ ಇದಾಗಿದೆ. ಉಭಯ ನಾಯಕರು ರಾಷ್ಟ್ರೀಯ ಹಿತಾಸಕ್ತಿ ವಿಷಯಗಳ ಬಗ್ಗೆ ಚರ್ಚಿಸಿರಬಹುದು ಎನ್ನಲಾಗಿದೆ.