Advertisement
ಹಾಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಉಪಮೇಯರ್ ಸುನೀತಾ ಅವರ ಅಧಿಕಾರಾವಧಿ ಸೆ. 8ರಂದು ಪೂರ್ಣಗೊಳ್ಳಲಿದೆ. ಈ ವೇಳೆ ನೂತನ ಮೇಯರ್-ಉಪಮೇಯರ್ ಆಯ್ಕೆ ನಡೆಯಬೇಕು. ಅದಕ್ಕೂ ಮುನ್ನ ಸರಕಾರದಿಂದ ಮೀಸಲಾತಿ ಪ್ರಕಟಗೊಳ್ಳಬೇಕು. ಬಳಿಕ ಆಯ್ಕೆ ಪ್ರಕ್ರಿಯೆ ನಡೆಯಲು ಸುಮಾರು ಎರಡರಿಂದ ಮೂರು ವಾರಗಳು ಬೇಕು. ನಂತರ ನಡೆಯುವ ಹೊಸ ಮೇಯರ್ ಅಧಿಕಾರಾವಧಿ ಫೆ. 28ರ ವರೆಗೆ (6 ತಿಂಗಳು ಮಾತ್ರ) ಮಾತ್ರ ಇರಲಿದೆ.
ಮಂಗಳೂರು ಪಾಲಿಕೆಯ ನೂತನ ಮೇಯರ್ ಆಯ್ಕೆ ಸಂಬಂಧಿಸಿ ಇನ್ನೂ ಕೂಡ ಮೀಸಲಾತಿ ಆದೇಶ ಪಾಲಿಕೆಗೆ ಬಂದಿಲ್ಲ. ಮೀಸಲಾತಿ ಕಲ್ಪಿಸುವಂತೆ ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸರಕಾರದ ಸೂಚನೆಯ ಪ್ರಕಾರ ನಿರ್ಧರಿಸಲಾಗುವುದು.
Related Articles
Advertisement
ಬಿಜೆಪಿ ಆಡಳಿತದ ಮೊದಲ ಅವಧಿಯಲ್ಲಿ ಹಿಂದುಳಿದ ವರ್ಗ ಎ ಮೀಸಲಾತಿಯ ಪ್ರಕಾರ ದಿವಾಕರ್ ಪಾಂಡೇಶ್ವರ ಮೇಯರ್ ಆಗಿದ್ದರು. ಅನಂತರ ಮೂರು ಅವಧಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್ ಬಳಿಕ ಸುಧೀರ್ ಶೆಟ್ಟಿ ಕಣ್ಣೂರು ಮೇಯರ್ ಆಗಿ ಆಯ್ಕೆಯಾಗಿದ್ದರು. ಮುಂದಿನ ಮೇಯರ್ ಮಹಿಳೆ ಅಥವಾ ಪರಿಶಿಷ್ಟ ಜಾತಿಗೆ ಮೀಸಲಾಗುವ ಸಾಧ್ಯತೆ ಇದೆ ಎಂದು ಚರ್ಚಿಸಲಾಗುತ್ತಿದೆ.