ಮಂಗಳೂರು: ಸಂಪರ್ಕ ಸೇತುವೆ ಇಲ್ಲದೆ ಪರದಾಡುತ್ತಿರುವ ದ್ವೀಪ ನಿವಾಸಿಗಳು ಇಂದು ನಡೆದ ಲೋಕ ಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಬೋಟ್ ಮೂಲಕ ಬಂದಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವೂರು ಉಳಿಯ ದ್ವೀಪದ ಜನರು ಹಲವು ವರ್ಷಗಳಿಂದ ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕವೇ ನಗರ ಪ್ರದೇಶಕ್ಕೆ ಬರಬೇಕಾದ ಸ್ಥಿತಿ ಇಲ್ಲಿಯ ಜನರದ್ದು ಆದರೆ ಇಂದು ಅದನ್ನೆಲ್ಲಾ ಮರೆತು ಬೋಟ್ ಮೂಲಕ ನದಿ ದಾಟಿ ಬಂದು ಮತದಾನ ಮಾಡಿ ತಮ್ಮ ಕರ್ತವ್ಯ ಮೆರೆದಿದ್ದಾರೆ.
ದ್ವೀಪದ ಸುತ್ತ ಹರಿಯುತ್ತಿರುವ ನೇತ್ರಾವತಿ ನದಿ ಸಂಪರ್ಕ ಸೇತುವೆಯಿಲ್ಲದೆ ಹಲವು ವರ್ಷಗಳಿಂದ ಇಲ್ಲಿನ ಪರದಾಡುತ್ತಿದ್ದಾರೆ, ಸಂಪರ್ಕ ಸೇತುವೆಗಾಗಿ ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ಮಾಡಿದ್ರು ಇದುವರೆಗೂ ಬೇಡಿಕೆ ಈಡೇರಿಲ್ಲ. ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು 150 ಕ್ಕೂ ಹೆಚ್ಚು ಮತದಾರರನ್ನು ಹೊಂದಿದ್ದಾರೆ.
ಬೋಟ್ ಮೂಲಕ ಬಂದು ಮತ ಚಲಾಯಿಸಿದ ಹಿರಿಯರು, ಮಹಿಳೆಯರು, ಯುವತಿ-ಯುವಕರು. ಈ ಬಾರಿಯಾದರೂ ತೂಗು ಸೇತುವೆ ನಿರ್ಮಾಣವಾಗುವ ಭರವಸೆ ವ್ಯಕ್ತಪಡಿಸಿದ ದ್ವೀಪ ನಿವಾಸಿಗಳು.
ಇದನ್ನೂ ಓದಿ: INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್