Advertisement

KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ

04:35 PM Nov 21, 2024 | Team Udayavani |

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯು ತನ್ನ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಬ್ಲಾಕ್‌ನಲ್ಲಿ ಹೊಸದಾಗಿ ನವೀಕರಿಸಿದ ವೈದ್ಯಕೀಯ ಆಂಕೊಲಾಜಿ ಹೊರರೋಗಿ ವಿಭಾಗ (OPD) ಮತ್ತು ಕೀಮೋಥೆರಪಿ ಡೇ ಕೇರ್ ಕೇಂದ್ರದ   ಉದ್ಘಾಟನೆ ಗುರುವಾರ (ನ.21) ನಡೆಯಿತು.

Advertisement

ರೋಗಿಗಳು ಮತ್ತು ಸಂದರ್ಶಕರಿಗೆ ಉತ್ತಮ ಸೇವೆ ನೀಡುವ, ಉತ್ತಮವಾಗಿ ವಿನ್ಯಾಸಗೊಳಿಸಲಾದ ವೈಟಿಂಗ್‌ ಕೋಣೆಯೊಂದಿಗೆ ಆರಾಮದಾಯಕ ಸಮಾಲೋಚನೆ ಸೌಲಭ್ಯಗಳನ್ನು ನವೀಕರಿಸಲಾಗಿವೆ. ಡೇ ಕೇರ್ ಕೇಂದ್ರವು ಕೀಮೋಥೆರಪಿ ಮತ್ತು ಇತರ ವಿಶೇಷ ಆಂಕೊಲಾಜಿ ಚಿಕಿತ್ಸೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಸುಧಾರಿತ ಡೇ ಕೇರ್ ಸೆಂಟರ್ ಅನ್ನು ಉದ್ಘಾಟಿಸಿ ಮಾತನಾಡಿ ಅತ್ಯಾಧುನಿಕ ವೈದ್ಯಕೀಯ ಆರೈಕೆಯನ್ನು ಒದಗಿಸಲು ಮತ್ತು ರೋಗಿಗಳ ಸೌಕರ್ಯವನ್ನು ಹೆಚ್ಚಿಸಲು ಸಂಸ್ಥೆಯ ಬದ್ಧತೆಯನ್ನು ಒತ್ತಿ ಹೇಳಿದರು.

ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಉಪ ಕುಲಪತಿ ಡಾ. ಶರತ್ ಕೆ. ರಾವ್, ಅವರು ನವೀಕರಿಸಿದ ಹೊರ ರೋಗಿ ವಿಭಾಗವನ್ನು ಉದ್ಘಾಟಿಸಿದರು. ಮೂಲಸೌಕರ್ಯ ಮತ್ತು ಆರೋಗ್ಯ ಸೇವೆಗಳನ್ನು ಸುಧಾರಿಸಲು ತೆಗೆದುಕೊಂಡ ಸಮಗ್ರ ವಿಧಾನವನ್ನು ಶ್ಲಾಘಿಸಿದರು.

Advertisement

ವೈದ್ಯಕೀಯ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕರುಗಳಾದ ಡಾ. ಕಾರ್ತಿಕ್ ಉಡುಪ ಮತ್ತು ಡಾ. ಅನಂತ್ ಪೈ ಅವರು ನವೀಕರಿಸಿದ ಕೇಂದ್ರದಲ್ಲಿ ಲಭ್ಯವಿರುವ ಸೇವೆಗಳ ಶ್ರೇಣಿ ಮತ್ತು ವರ್ಧಿತ ರೋಗಿಗಳ ಆರೈಕೆ ಸಾಮರ್ಥ್ಯಗಳ ಕುರಿತು ಒಳನೋಟಗಳನ್ನು ಹಂಚಿಕೊಂಡರು.

ಸಮಾರಂಭದಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ; ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಸಿ ಓಓ ಡಾ. ಆನಂದ್ ವೇಣುಗೋಪಾಲ್; ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ, ಕೆ ಎಂ ಸಿ ಮಣಿಪಾಲದ ಸಹ ಡೀನ್ ಮತ್ತು ಮಣಿಪಾಲ್ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ (MCCCC) ನ ಸಂಯೋಜಕರಾದ ಡಾ. ನವೀನ್ ಸಾಲಿನ್ಸ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next