Advertisement

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

04:02 PM Nov 05, 2024 | Team Udayavani |

ಉರ್ವ: ಇಲ್ಲಿನ ಉರ್ವ ಮಾರುಕಟ್ಟೆ ವೃತ್ತದಿಂದ ಲೇಡಿಹಿಲ್‌ ನಾರಾಯಣ ಗುರು ವೃತ್ತದ ಕಡೆಗೆ ಸಾಗುವ ರಸ್ತೆಯಲ್ಲಿ ಎಡಬದಿಯಲ್ಲಿ ಫುಟ್‌ಪಾತ್‌ ನಿರ್ಮಾಣದ ಉದ್ದೇಶಕ್ಕೆ ರಚಿಸಲಾಗಿದ್ದ ಕಾಂಕ್ರೀಟ್‌ ಚೇಂಬರ್‌ಗಳನ್ನು ಮುಚ್ಚಲಾಗಿದೆ. ಚೌಕಾಕಾರದ ಕಬ್ಬಿಣದ ಮುಚ್ಚಳವನ್ನು ಚೇಂಬರ್‌ ಮೇಲೆ ಇಡಲಾಗಿದ್ದು, ಇದರಿಂದಾಗಿ ಸಂಭಾವ್ಯ ಅಪಾಯ ತಪ್ಪಿದಂತಾಗಿದೆ.

Advertisement

ಫುಟ್‌ಪಾತ್‌ ಕಾಮಗಾರಿ ನಡೆಯುತ್ತಿದ್ದು, ಇವುಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚದಿ ರುವ ಕಾರಣ ಅಪಾಯಕ್ಕೆ ಆಹ್ವಾನ ನೀಡಿದಂತಿದೆ ಎಂದು ಸ್ಥಳೀ ಯರು ಆರೋಪಿಸಿದ್ದರು. ಯಾರಾ ದರೂ ಅದರೊಳಗೆ ಬಿದ್ದು ಗಾಯಗೊಳ್ಳುವ ಮೊದಲು ಮುಚ್ಚಳ ಅಳವಡಿಸುವಂತೆ ಆಗ್ರಹಿಸಿದ್ದರು.

ಈ ಬಗ್ಗೆ ಅ. 29ರ ‘ಉದಯವಾಣಿ ಸುದಿನ’ದಲ್ಲಿ ಉರ್ವ ‘ಫುಟ್‌ಪಾತ್‌ನಲ್ಲಿ ಬಾಯ್ದೆರೆದಿದೆ ಚೇಂಬರ್‌’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸ ಲಾಗಿತ್ತು. ಇದೀಗ ವರದಿಗೆ ಸ್ಪಂದಿಸಿ ಮುಚ್ಚಳ ಇರಿಸಲಾಗಿದೆ. ಶೀಘ್ರ ಫುಟ್‌ಪಾತ್‌ ಕಾಮಗಾರಿ ಮುಗಿಸಿ ಪಾದಚಾರಿಗಳಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next