Advertisement

UPPSC: ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿದ ಉತ್ತರ ಪ್ರದೇಶ ಸರಕಾರ

12:19 AM Nov 15, 2024 | Team Udayavani |

ಪ್ರಯಾಗ್‌ರಾಜ್‌: ಅಭ್ಯರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪರಿಶೀಲನ ಅಧಿಕಾರಿ(ರಿವ್ಯೂ ಆಫೀ ಸರ್‌-ಆರ್‌ಒ) ಮತ್ತು ಸಹಾಯಕ ಪರಿಶೀಲನ ಅಧಿಕಾರಿ(ಅಸಿಸ್ಟಂಟ್‌ ರಿವ್ಯೂ ಆಫೀಸರ್‌-ಎಆರ್‌ಒ) ಹುದ್ದೆಗಳ ಪರೀಕ್ಷೆಯನ್ನು ಉತ್ತರ ಪ್ರದೇಶ ಲೋಕ ಸೇವಾ ಆಯೋಗ(ಯುಪಿಪಿಎಸ್‌ಸಿ) ಮುಂದೂಡಿದೆ.

Advertisement

ಡಿ.7 ಮತ್ತು 8ರಂದು ಪಿಸಿಎಸ್‌ ಪೂರ್ವ ಭಾವಿ ಪರೀಕ್ಷೆ ಹಾಗೂ ಆರ್‌ಒ ಮತ್ತು ಎಆರ್‌ಒ ಪರೀಕ್ಷೆಗಳನ್ನು ಡಿ.22 ಮತ್ತು 23ರಂದು ನಡೆಸಲು ಉದ್ದೇಶಿಸಲಾಗಿತ್ತು. ಅದರ ವಿರುದ್ಧ ಅಭ್ಯರ್ಥಿಗಳು 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಆಗ್ರಹಕ್ಕೆ ಮಣಿದ ಆಯೋಗ ಹಿಂದಿನ ಪದ್ಧತಿಯಂತೆ ಪ್ರಾಂತೀಯ ನಾಗರಿಕ ಸೇವಾ (ಪಿಎಸ್‌ಸಿ) 2024ರ ಪೂರ್ವಭಾವಿ ಪರೀಕ್ಷೆಯನ್ನು ಒಂದೇ ದಿನ ನಡೆಸಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next