Advertisement

Manipur ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡಿನ ಕಾಳಗದಲ್ಲಿ 4 ಸಾವು

12:46 AM Aug 12, 2024 | Team Udayavani |

ಇಂಫಾಲ್‌: ಸಂಘರ್ಷ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ತೆಂಗನೌಪಾಲ್‌ ಜಿಲ್ಲೆಯಲ್ಲಿ ಯುನೈಟೆಡ್‌ ಕುಕಿ ಲಿಬರೇಶನ್‌ ಫ್ರಂಟ್‌ (ಯುಕೆಎಲ್‌ಎಫ್) ಬಂಡುಕೋರರು, ಕುಕಿ ಸಮುದಾಯಕ್ಕೆ ಸೇರಿದ ಗ್ರಾಮಸ್ಥರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Advertisement

ಹಣ ವಸೂಲಾತಿ ಸಂಬಂಧಿಸಿದಂತೆ ಬಂಡುಕೋರರು ಹಾಗೂ ಗ್ರಾಮಸ್ಥರ ನಡುವೆ ಜಟಾಪಟಿ ನಡೆದಿದ್ದೇ ಘಟನೆಗೆ ಕಾರಣವಿರಬಹುದು ಎಂದು ಪೊಲೀ ಸರು ಶಂಕೆ ವ್ಯಕ್ತಪಡಿಸಿದ್ದಾರೆ. ದಾಳಿ ವೇಳೆ ಓರ್ವ ಬಂಡುಕೋರ ಮತ್ತು ಮೂವರು ಗ್ರಾಮಸ್ಥರು ಮೃತಪಟ್ಟಿದ್ದಾರೆ. ಗ್ರಾಮಸ್ಥರ ಸಾವಿಗೆ ಪ್ರತೀಕಾರವಾಗಿ ಯುಕೆಎಲ್‌ಎಫ್ನ ಮುಖ್ಯಸ್ಥನ ನಿವಾಸಕ್ಕೆ ಜನರು ಬೆಂಕಿ ಹಚ್ಚಿದ್ದಾರೆ.

ಮಾಜಿ ಶಾಸಕರ ಪತ್ನಿ ಸಾವು: ಕಾಂಗ್‌ಪೋಕಪಿ ಜಿಲ್ಲೆಯ ಸೈಕುಲ್‌ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಯಾಮ್‌ತೋಂಗ್‌ ಹಾಕಿಪ್‌ ಅವರ ನಿವಾಸದಲ್ಲಿ ಬಾಂಬ್‌ ಸ್ಫೋಟಗೊಂಡಿದೆ. ಅವರ ಪತ್ನಿ ಸಪಂ ಚಾರುಬಾಲಾ ಮೃತಪಟ್ಟಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ನಡುವೆ, ಬಂಗ್ಲೋನ್‌ ಎಂಬಲ್ಲಿ ಕುಕಿ ಉಗ್ರರ ಅಡಗುತಾಣವನ್ನು ಬಿಎಸ್‌ಎಫ್ ಯೋಧರು ನಾಶಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next