Advertisement

Vinod Prabhakar: ‘ಮಾದೇವ’ನ ಎದೆಯಲ್ಲಿ ತಂಗಾಳಿ!

03:28 PM Jun 07, 2024 | Team Udayavani |

“ಮಾದೇವ’- ಇದು ವಿನೋದ್‌ ಪ್ರಭಾಕರ್‌ ನಾಯಕರಾಗಿರುವ ಸಿನಿಮಾ. ಕೆಲವು ತಿಂಗಳ ಹಿಂದಷ್ಟೇ ಈ ಸಿನಿಮಾದ ಮಾಸ್‌ ಟೀಸರ್‌ ಬಿಡುಗಡೆಯಾಗಿತ್ತು. ಈಗ ಚಿತ್ರದ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಈ ಚಿತ್ರವನ್ನು ನವೀನ್‌ ರೆಡ್ಡಿ ನಿರ್ದೇಶಿಸಿದ್ದಾರೆ.

Advertisement

ನಟ ವಿನೋದ್‌ ಪ್ರಭಾರ್ಕ ಮಾತನಾಡಿ, “ನನ್ನ ಕೆರಿಯರ್‌ನ ಬೆಸ್ಟ್‌ ಸಿನಿಮಾ ಇದು. ಚಿತ್ರದಲ್ಲಿ ನನ್ನದು ಡಿ-ಗ್ಲಾಮರ್‌ ಪಾತ್ರ. ಒಬ್ಬ ನಟನಾಗಿ ಗುರುತಿಸಿಕೊಳ್ಳಲು ಬಹಳಷ್ಟಿದೆ. ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಈ ಸಿನಿಮಾ ಖಂಡಿತ ಹಿಟ್‌ ಆಗುತ್ತದೆ. ಕೊನೆಯ 40 ನಿಮಿಷ ಪ್ರತಿಯೊಬ್ಬರಿಗೂ ಮಾದೇವನಾಗಿ ಸಿನಿಮಾ ನೋಡುತ್ತಾರೆ. ನಾನೇ ಈ ರೀತಿ ಸಿನಿಮಾವನ್ನು ಮತ್ತೂಮ್ಮೆ ಮಾಡಲು ಆಗುವುದಿಲ್ಲ. ಈ ಕಥೆ ಬಹಳಷ್ಟು ಜನರನ್ನು ಒಳಗಡೆ ಕರೆದುಕೊಂಡು ಬಂದಿದೆ. ಈ ಚಿತ್ರಕ್ಕಾಗಿ ಬಹಳಷ್ಟು ಹೋಮ್‌ ವರ್ಕ್‌ ಮಾಡಿದ್ದೇನೆ. ಆ್ಯಂಗ್ರಿ ಯಂಗ್‌ಮೆನ್‌ ಆಗಿ ನಟಿಸಿದ್ದೇನೆ’ ಎಂದರು

ಸೋನಾಲ್‌ ಮೊಂತೆರೋ ಈ ಚಿತ್ರದ ನಾಯಕಿ. ಈ ಚಿತ್ರದ ಮೇಲೆ ಸೋನಾಲ್‌ ಕೂಡಾ ನಿರೀಕ್ಷೆ ಇಟ್ಟಿದ್ದಾರೆ. “ಮಾದೇವ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದೆ. ನಾನು ಕಲಾವಿದೆಯಾಗಿ ಅಲ್ಲ ಆಡಿಯನ್ಸ್‌ ಆಗಿ ಸಿನಿಮಾ ನೋಡಲು ಕಾಯುತ್ತಿದ್ದೇನೆ. ನಾನು ಮಾಡಿರುವ ಸಿನಿಮಾಗಳಲ್ಲಿ ಇದು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನಾನು ಈ ರೀತಿಯ ಪಾತ್ರದಲ್ಲಿ ನಟಿಸಿಲ್ಲ. ಇದೇ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ನನ್ನ ಹಾಗೂ ವಿನೋದ್‌ ಅವರ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬರು ಈ ಸಿನಿಮಾವನ್ನು ಎಂಜಾಯ್‌ ಮಾಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು ಸೋನಾಲ್‌.

ಬಿಡುಗಡೆಯಾಗಿರುವ “ಎದೆಯಲ್ಲಿ ತಂಗಾಳಿ..’ ಎಂಬ ಪ್ರೇಮಗೀತೆಗೆ ಪ್ರಸನ್ನ ಕುಮಾರ್‌ ಎಂ ಸಾಹಿತ್ಯ ಬರೆದಿದ್ದು, ಅನನ್ಯ ಭಟ್‌ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಪ್ರದ್ಯೋತ್ತನ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿನಲ್ಲಿ ವಿನೋದ್‌ ಪ್ರಭಾಕರ್‌ ಹಾಗೂ ಸೋನಲ್‌ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಈ ಸಿನಿಮಾದ ಕಥೆ 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯುತ್ತದೆ. ವಿಭಿನ್ನವಾದ ಲುಕ್‌ನಲ್ಲಿ ವಿನೋದ್‌ ಪ್ರಭಾಕರ್‌ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀನಗರಕಿಟ್ಟಿ ಖಳನಾಯಕನಾಗಿ ನಟಿಸುತ್ತಿರುವುದು ವಿಶೇಷ. ನಟಿ ಶ್ರುತಿ ಮತ್ತು ಅಚ್ಯುತ್‌ ಕುಮಾರ್‌, ಕಾಕ್ರೋಚ್‌ ಸುಧಿ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಕೃಷ್ಣ ತೋಟ ಮಾದೇವ’ ಸಿನಿಮಾಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಕೇಶವ ದೇವಸಂದ್ರ ಈ ಚಿತ್ರದ ನಿರ್ಮಾಪಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next