ವಿನಯಪ್ರಸಾದ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿನಯಾ ಪ್ರಸಾದ್ ಹಾಗೂ ಜ್ಯೋತಿ ಪ್ರಕಾಶ್ ಅವರು ನಿರ್ಮಿಸುತ್ತಿರುವ “ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ’ ಚಿತ್ರಕ್ಕೆ ಬೆಂಗಳೂರಿನಲ್ಲಿ ನಿರಂತರ ಚಿತ್ರೀಕರಣ ನಡೆಯುತ್ತಿದೆ. ಕಳೆದ ಎಂಟು ದಿನಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಯಾವುದೇ ಅಡೆತಡೆಗಳಿಲ್ಲದೆ ಚಿತ್ರೀಕರಣ ಸಾಗಿದೆ ಎಂದು ನಿರ್ಮಾಪಕರು ಸಂತಸ ವ್ಯಕ್ತ ಪಡಿಸಿದ್ದಾರೆ.
ವಿನಯಾ ಪ್ರಸಾದ್ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಜೆ.ಜೆ.ಕೃಷ್ಣ ಅವರ ಛಾಯಾಗ್ರಹಣವಿದೆ. ಈ ಹಾಸ್ಯಭರಿತ ಕೌಟುಂಬಿಕ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಜ್ಯೋತಿ ಪ್ರಕಾಶ್ ಅವರು
ಸಂಗೀತ ನಿರ್ದೇಶನ ಹಾಗೂ ಕ್ರಿಯಾತ್ಮಕ ನಿರ್ದೇಶನ ಸಹ ಮಾಡಿದ್ದಾರೆ. ವಿನಯಾ ಪ್ರಸಾದ್ ಸಂಭಾಷಣೆಯನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ.
ಮಂಜುನಾಥ್ ಹೆಗಡೆ, ವಿನಯಾ ಪ್ರಸಾದ್, ಜ್ಯೋತಿ ಪ್ರಕಾಶ್, ಪ್ರಥಮ ಪ್ರಸಾದ್ ರಾವ್, ಋತು, ಶೈಲಜಾ ಜೋಶಿ, ದೀಪಕ್ ಕುಮಾರ್ ಜೆ.ಕೆ ಮುಂತಾದವರು “ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ ಚಿತ್ರದ ತಾರಾಬಳಗದಲ್ಲಿದ್ದಾರೆ.
ಈ ಸಿನಿಮಾದಲ್ಲಿ ವಿನಯಾಪ್ರಸಾದ್ ಅವರ ಪುತ್ರಿ ಪ್ರಥಮಾ ಮೊದಲ ಬಾರಿಗೆ ನಟಿಸುತ್ತಿದ್ದಾರೆ.