Advertisement

ISRO: ಪ್ರಜ್ಞಾನ್‌ ಚಲನೆಗಳನ್ನು ದಾಖಲಿಸುತ್ತಿದೆ ವಿಕ್ರಮ್‌ನ ILSA

09:57 PM Aug 31, 2023 | Team Udayavani |
ನವದೆಹಲಿ: ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ನಲ್ಲಿರುವ ಐಎಲ್‌ಎಸ್‌ಎ(ಇನ್ಸ್‌ಸ್ಟ್ರೆಮೆಂಟ್‌ ಫಾರ್‌ ದಿ ಲೂನಾರ್‌ ಸೀಸ್ಮಿಕ್‌ ಆ್ಯಕ್ಟಿವಿಟಿ), ಪ್ರಜ್ಞಾನ್‌ ರೋವರ್‌ ಮತ್ತು ಇತರೆ ಪೇಲೋಡ್‌ಗಳ ಚಲನವಲನಗಳನ್ನು ದಾಖಲಿಸುತ್ತಿದೆ ಎಂದು ಇಸ್ರೋ ಗುರುವಾರ ತಿಳಿಸಿದೆ.
“ಪ್ರಾಕೃತಿಕ ಕಂಪನಗಳು, ಕೃತಕ ಘಟನೆಗಳು ಹಾಗೂ ಪರಿಣಾಮಗಳನ್ನು ಅಳೆಯುವುದು ಐಎಲ್‌ಎಸ್‌ಎ ನ ಪ್ರಾಥಮಿಕ ಉದ್ದೇಶವಾಗಿದೆ. ಆ.25ರಂದು ರೋವರ್‌ನ ಚಲನವನಗಳನ್ನು ಐಎಲ್‌ಎಸ್‌ಎ ದಾಖಲಿಸಿತ್ತು. ಇದೇ ರೀತಿ ಆ.26ರಂದು ಕೂಡ ಚಲನವನಗಳನ್ನು ದಾಖಲಿಸಿದೆ. ಈ ಘಟನೆಯ ಮೂಲಗಳನ್ನು ತನಿಖೆ ಮಾಡಲಾಗುತ್ತಿದೆ. ಆದರೂ ಚಲನವಲನಗಳು ಸಹಜವಾಗಿ ಕಂಡುಬಂದಿದೆ. ಐಎಲ್‌ಎಸ್‌ಎ ತನ್ನ ಕಾರ್ಯವನ್ನು ಮುಂದುವರಿಸಿದೆ’ ಎಂದು ಇಸ್ರೋ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಅಭಿವೃದ್ಧಿ: ಬೆಂಗಳೂರಿನಲ್ಲಿರುವ ಎಲ್‌ಇಒಎಸ್‌ (ಎಲೆಕ್ಟ್ರೊ-ಆಪ್ಟಿಕ್ಸ್‌ ಸಿಸ್ಟಮ್ಸ್‌ ಪ್ರಯೋಗಾಲಯ) ಐಎಲ್‌ಎಸ್‌ಎ ಅನ್ನು ಅಭಿವೃದ್ಧಿಪಡಿಸಿದೆ. ಹೆಚ್ಚಿನ ಸಂವೇದನೆಯ 6 ವೇಗವರ್ಧಕಗಳನ್ನು ಐಎಲ್‌ಎಸ್‌ಎ ಹೊಂದಿದೆ ಎಂದು ಇಸ್ರೋ ತಿಳಿಸಿದೆ.
ಗಂಧಕವನ್ನೂ ಮತ್ತೂಮ್ಮೆ ದೃಢಪಡಿಸಿದ ಎಪಿಎಕ್ಸ್‌ಎಸ್‌
ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಹಾಗೂ ಇತರೆ ಅಂಶಗಳು ಇರುವುದನ್ನು ಈಗಾಗಲೇ ಪ್ರಜ್ಞಾನ್‌ ರೋವರ್‌ನಲ್ಲಿರುವ ಎಲ್‌ಐಬಿಎಸ್‌ ಪೇಲೋಡ್‌ ಪತ್ತೆ ಮಾಡಿದೆ. ಅದನ್ನು ಅದೇ ರೋವರ್‌ನಲ್ಲಿರುವ ಮತ್ತೂಂದು ಪೇಲೋಡ್‌ ಎಪಿಎಕ್ಸ್‌ಎಸ್‌ ಕೂಡ ಖಚಿತಪಡಿಸಿದೆ. ಆರಂಭದಲ್ಲಿ ಎಲ್‌ಐಬಿಎಸ್‌ ಗಂಧಕ, ಅಲ್ಯುಮಿನಿಯಂ, ಕ್ಯಾಲಿÒಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್‌, ಸಿಲಿಕಾನ್‌ ಧಾತುಗಳನ್ನು ಪತ್ತೆ ಮಾಡಿತ್ತು. ಈ ಎಲ್‌ಐಬಿಎಸ್‌ ಉಪಕರಣವನ್ನು ಬೆಂಗಳೂರಿನ ಎಲೆಕ್ಟ್ರೊ- ಆಪ್ಟಿಕÕ… ಸಿಸ್ಟಮ್‌ ಪ್ರಯೋಗಾಲಯ ಅಭಿವೃದ್ಧಿಪಡಿಸಿತ್ತು.
ಪಥ ಬದಲಾವಣೆ ವಿಡಿಯೊ: ಬೆಂಗಳೂರಿನಲ್ಲಿರುವ ಇಸ್ರೋ ಕಮಾಂಡ್‌ ಸೆಂಟರ್‌ನಿಂದ ಪ್ರಜ್ಞಾನ್‌ ರೋವರ್‌ಗೆ ಕಮಾಂಡ್‌ಗಳನ್ನು ನೀಡಲಾಗುತ್ತಿದೆ. ಮುಂದಿನ ವಾರ ಅಂದರೆ ಚಂದ್ರನಲ್ಲಿ ರಾತ್ರಿಯಾಗುವ ಮುನ್ನ ಅಧ್ಯಯನವನ್ನು ಪೂರ್ಣಗೊಳಿಸಬೇಕಿದೆ. ಈ ಹಿನ್ನೆಲ್ಲೆಯಲ್ಲಿ ಚಂದ್ರನ ಮೇಲ್ಮೆ„ನಲ್ಲಿರುವ ಅನೇಕ ಕುಳಿ, ದೊಡ್ಡ ಕಲ್ಲುಗಳನ್ನು ತಪ್ಪಿಸಲು ಬೇರೆ ಮಾರ್ಗವನ್ನು ಹುಡುಕಲಾಗುತ್ತಿದೆ. ಅದಕ್ಕಾಗಿ ರೋವರ್‌ ಅನ್ನು ಸುರಕ್ಷಿತ ಮಾರ್ಗಕ್ಕೆ ತಿರುಗಿಸಲಾಗಿದೆ. ಅದರ ದೃಶ್ಯವು ಲ್ಯಾಂಡರ್‌ನಲ್ಲಿನ ನ್ಯಾವಿಗೇಶನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಇಸ್ರೋ ತಿಳಿಸಿದೆ.
ಇಸ್ರೋ ಅಧ್ಯಕ್ಷರಿಗೆ ಆತ್ಮೀಯ ಸ್ವಾಗತ
ಇಂಡಿಗೋ ವಿಮಾನದ ಗಗನಸಖೀಯರು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವರಿಗೆ ಆತ್ಮೀಯ ಸ್ವಾಗತ ನೀಡಿದ್ದಾರೆ. ಈ ಕುರಿತು ವಿಡಿಯೊ ಅನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಗಗನಸಖೀ ಪೂಜಾ ಶಾ ಹಂಚಿಕೊಂಡಿದ್ದಾರೆ. ಸೋಮನಾಥ್‌ ಅವರು ವಿಮಾನ ಪ್ರವೇಶಿಸುತ್ತಿದ್ದಂತೆ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ಗಗನಸಖೀಯರು, ಅವರನ್ನು ಆಸನದಲ್ಲಿ ಕೂರಿಸಿದ್ದಾರೆ. ನಂತರ, “ನಮ್ಮ ರಾಷ್ಟ್ರೀಯ ಹೀರೊಗೆ ಭವ್ಯ ಸ್ವಾಗತ. ಅವರನ್ನು ಕರತಾಡನದ ಮೂಲಕ ಎಲ್ಲರೂ ಸ್ವಾಗತಿಸೋಣ. ಇಂದು ನಮ್ಮೊಂದಿಗೆ ನೀವು ಪ್ರಯಾಣಿಸುತ್ತಿರುವುದೇ ಹೆಮ್ಮೆಯ ಸಂಗತಿ. ಭಾರತವನ್ನು ಹೆಮ್ಮೆಯ ರಾಷ್ಟ್ರವನ್ನಾಗಿಸಿದ್ದಕ್ಕೆ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು’ ಎಂದು ಗಗನಸಖೀ ಹೇಳಿದ್ದಾರೆ.
ಈ ದೃಶ್ಯವು(ವಿಕ್ರಮ್‌-ಪ್ರಜ್ಞಾನ್‌ ಚಿತ್ರ) ಪುಟ್ಟ ಮಗುವೊಂದು(ರೋವರ್‌) ಚಂದಮಾಮನ ಮೇಲೆ ಕುಣಿಯುತ್ತ ಆಟವಾಡುತ್ತಿದ್ದು, ಅಮ್ಮ(ಲ್ಯಾಂಡರ್‌) ಅದನ್ನು ಪ್ರೀತಿಯಿಂದ ನೋಡುವಂತಿದೆ.
– ಇಸ್ರೋ (ಎಕ್ಸ್‌)
Advertisement

Udayavani is now on Telegram. Click here to join our channel and stay updated with the latest news.

Next