Advertisement

ಆಗಸ್ಟ್‌ ಮೊದಲನೇ ವಾರ ವಿಜೇಂದರ್‌ v/s ಜುಲ್ಫಿಕರ್‌ ಸೆಣಸು

10:26 AM Jun 23, 2017 | Team Udayavani |

ನವದೆಹಲಿ: ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಜೇಯ ಸಾಧಕನಾಗಿ ಮುಂದುವರಿದಿರುವ ಭಾರತದ ಸ್ಟಾರ್‌ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಮುಂದಿನ ಪಂದ್ಯದಲ್ಲಿ ಚೀನಾದ ಖ್ಯಾತ ಬಾಕ್ಸರ್‌ ಜುಲ್ಫಿàಕರ್‌ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ. ಪಂದ್ಯ ಆಗಸ್ಟ್‌ ಮೊದಲನೇ ವಾರ ಮುಂಬೈನಲ್ಲಿ ನಡೆಯಲಿದೆ. 

Advertisement

2015ರಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಬಂದ ವಿಜೇಂದರ್‌ ಸಿಂಗ್‌ ಇಲ್ಲಿಯವರೆಗೂ ಆಡಿರುವ 8 ಪಂದ್ಯಗಳನ್ನು ಗೆದ್ದು ಡಬ್ಲೂéಬಿಒ ಏಷ್ಯಾ ಪೆಸಿಫಿಕ್‌ ಸೂಪರ್‌ ಮಿಡಲ್‌ವೇಟ್‌ ಚಾಂಪಿಯನ್‌ ಶಿಪ್‌ ಪ್ರಶಸ್ತಿಯನ್ನು ಪಡೆದಿದ್ದಾರೆ. ಅದೇ ರೀತಿ 2015ರಲ್ಲಿಯೇ ವೃತ್ತಿಪರ ಬಾಕ್ಸಿಂಗ್‌ಗೆ ಬಂದ ಚೀನಾದ 22 ವರ್ಷದ ಜುಲ್ಫಿàಕರ್‌ 8 ಪಂದ್ಯಗಳನ್ನು ಆಡಿದ್ದು, ಎಲ್ಲಾ ಪಂದ್ಯಗಳಲ್ಲಿ ಗೆದ್ದು ಡಬ್ಲೂéಬಿಒ ಒರಿಯಂಟಲ್‌ ಸೂಪರ್‌ ಮಿಡಲ್‌ವೇಟ್‌ ಪ್ರಶಸ್ತಿಯನ್ನು ಪಡೆದಿದ್ದಾರೆ. ಇಬ್ಬರು ಪ್ರಬಲ ಸ್ಪರ್ಧಿಗಳಾಗಿರುವುದರಿಂದ ಬಾಕ್ಸಿಂಗ್‌ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next