Advertisement

Vijayapura; ಮುಂಗಾರು ಮಳೆ ವಿಫಲ: ಕತ್ತೆಗಳ ಮದುವೆ…!

07:17 PM Jul 12, 2023 | Vishnudas Patil |

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ವಿಫಲವಾಗಿದ್ದು, ಮಳೆಗಾಗಿ ಜಿಲ್ಲೆಯ ಜನರು ಸಾಂಪ್ರದಾಯಿಕದ ಆಚರಣೆಗೆ ಮುಂದಾಗಿದ್ದಾರೆ.ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ರೈತರು ಮಳೆಗಾಗಿ ಕತ್ತೆಗಳ ಮದುವೆ ಹಾಗೂ ವಿಶೇಷ ಹೋಮ, ಹವನ, ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

Advertisement

ಗ್ರಾಮದ ಹಿರಿಯರೆಲ್ಲ ಸೇರಿ ಸಾಂಪ್ರದಾಯಿಕ ಆಚರಣೆಗಾಗಿ ಕತ್ತೆಗಳಿಗೆ ಶಾಸ್ತ್ರೋಕ್ತ ಮದುವೆಗಾಗಿ ಬಾಸಿಂಗ್ ಕಟ್ಟಿ, ಹೂಮಾಲೆ ಹಾಕಿ ವಧು-ವರರಂತೆ ಸಿಂಗರಿಸಿ ಮದುವೆ, ಅಕ್ಷತಾ ಕಾರ್ಯಕ್ರಮ ನಡೆಸಿದ್ದಾರೆ. ಮುತೈದೆಯರು ತಲೆಯ ಮೇಲೆ ಕುಂಬ ಕಳಸ ಹೊತ್ತು ಸಾಗುತ್ತಾ ಕತ್ತೆಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಗುಲಾಲು ಎರಚಿ ಮೆರವಣಿಗೆ ಮಾಡಿದ್ದಾರೆ. ಕತ್ತೆಗಳ ಮೆರವಣಿಗೆ ಸಾಗುತ್ತಿದ್ದಂತೆ ಯುವಕರು ಡೊಳ್ಳು ಬಡಿಯುತ್ತಾ ಬಾಜಾ ಭಜಂತ್ರಿ ವಾಧ್ಯಗಳೊಂದಿಗೆ ಮೆರವಣಿಗೆಗೆ ಮೆರಗು ನೀಡಿದ್ದಾರೆ.

ಕಳೆದ ವರ್ಷ ಮಾರ್ಚ್-ಎಪ್ರಿಲ್ ಸಮಯದಲ್ಲಿ ಬೇಸಿಗೆಯ ಅರಿವು ನಮಗೆ ಆಗಗಿಲ್ಲ. ಬೇಸಿಗೆ ಇದ್ದರೂ ಶಾಸಕ ಎಂ.ಬಿ.ಪಾಟೀಲ ಮಾಡಿದ ನೀರಾವರಿ ಯೋಜನೆಯಿಂದ ನೀರಿನ ಸಮಸ್ಯೆ ಉದ್ಬವಿಸಲಿಲ್ಲ. ಆದರೆ ಈ ಬಾರಿ ಮಳೆಯೂ ಆಗಿಲ್ಲ, ಪ್ರಸಕ್ತ ವರ್ಷ ಕೃಷ್ಣಾ ನದಿಗೆ ನೀರು ಹರಿಯದೇ ಕಾಲುವೆಗಳಿಗೂ ನೀರು ಇಲ್ಲವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಇದರಿಂದಾಗಿ ದೇವರಲ್ಲಿ ಮಳೆಗಾಗಿ ಸಾಂಪ್ರದಾಯಿಕ ಆಚರಣೆಯಂತೆ ಕತ್ತೆಗಳ ಮದುವೆ ಮಾಡಿದ್ದೇವೆ. ಸಾಂಪ್ರದಾಯಿಕ ಈ ಆಚರಣೆಯಿಂದ ಮಳೆ ಬರುವ ನಂಬಿಕೆ ಇದೆ. ಹೀಗಾಗಿ ಕತ್ತೆಗಳ ಮದುವೆ ಮಾಡಿದ್ದೇವೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next