Advertisement
ಸೀತಾಪುರದ ಗೋವಿಂದಾಪುರ ಗ್ರಾಮದ ರೈತ ಕಮಲೇಶ್ ಎನ್ನುವವರು ಮೊದಲ ಪತ್ನಿಯನ್ನು ಕಳೆದುಕೊಂಡ ಬಳಿಕ ಇತ್ತೀಚೆಗೆ ಎರಡನೇ ಮದುವೆ ಆಗಲು ಸಿದ್ಧರಾಗಿದ್ದರು. ಕೆಲ ಸಂಬಂಧಗಳನ್ನು ನೋಡಿದ ಬಳಿಕ ದಲ್ಲಾಳಿ ಮೂಲಕ ಒಂದು ಹೆಣ್ಣನ್ನು ನೋಡಿ ಆಕೆಯ ಜತೆ ಮದುವೆ ಆಗುವುದಾಗಿ ಹೇಳಿ ದಲ್ಲಾಳಿಗೆ 30 ಸಾವಿರ ಕೊಟ್ಟು ಮದುವೆಗೆ ಸಿದ್ಧರಾಗಿದ್ದರು.
Related Articles
Advertisement
“ನನ್ನ ಪತ್ನಿ ಆಗಬೇಕಿದ್ದವಳಿಗೆ ಸೀರೆ, ಬ್ಯೂಟಿ ಪ್ರಾಡೆಕ್ಟ್ಸ್ ಮತ್ತು ಆಭರಣಗಳನ್ನು ನೀಡಿದ್ದೆ. ಇದರ ಜತೆ ಮದುವೆಯ ವೆಚ್ಚವನ್ನು ಭರಿಸಿದ್ದೆ. ನಾನು ನನ್ನ ಕುಟುಂಬವನ್ನು ಪುನರ್ನಿರ್ಮಿಸಲು ಬಯಸಿದ್ದೆ ಆದರೆ ಎಲ್ಲವನ್ನೂ ಕಳೆದುಕೊಂಡೆ” ಎಂದು ಕಮಲೇಶ್ ಹೇಳಿದ್ದಾರೆ.
ಈ ಬಗ್ಗೆ ಇದುವರೆಗೆ ದೂರು ದಾಖಲಾಗಿಲ್ಲ. ದೂರು ದಾಖಲಿಸಿದರೆ ತನಿಖೆ ನಡೆಸಲಾಗುವುದೆಂದು ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.