Advertisement

ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿ

04:28 PM Aug 28, 2021 | Team Udayavani |

ಗುಂಡ್ಲುಪೇಟೆ: ಲಿಂಗಾಯತರಿಗೆ 2ಎ ಮೀಸಲಾತಿ ಸಿಗದಿದ್ದಲ್ಲಿ ಮುಂದಿನ ಹೋರಾಟಗಳಿಗೆ ದಕ್ಷಿಣ ಭಾಗದ ಎಲ್ಲ ಲಿಂಗಾಯತರು ಬೆಂಬಲ
ನೀಡಬೇಕು ಎಂದು ಲಿಂಗಾಯಿತ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಸಪ್ಪನವರ್‌ ತಿಳಿಸಿದರು.

Advertisement

ತಾಲೂಕಿನ ಹಂಗಳದಲ್ಲಿ ಲಿಂಗಾಯಿತರ 2 ಮೀಸಲಾತಿ ಹೋರಾಟದ ನೇ ದಿನದ ಪ್ರತಿಜ್ಞಾ ಪಂಚಾಯತ್‌ ಅಭಿಯಾನ(2ಎ ಮೀಸಲಾತಿ
ಕೊಡಿರಿ-ಹೇಳಿದಂತೆ ನಡೆಯಿರಿ)ದಲ್ಲಿ ಮಾತನಾಡಿದರು.

ನಾವು ನೀಡಿರುವ ಸೆ.30 ಗಡುವು ಮುಗಿದ ಬಳಿಕ ಅ.1ರಿಂದ ಹೋರಾಟ ಮುಂದುವರಿಸ ಬೇಕಿದೆ. ಮೈಸೂರು, ಮಂಡ್ಯ, ಕೊಡುಗು, ಚಾಮರಾಜ ನಗರ ಜಿಲ್ಲೆಯಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ಗೌಡ ಲಿಂಗಾಯತರು ನಮ್ಮೊಂದಿಗೆ ಬೆಂಗಳೂರಿನಲ್ಲಿ 20 ಲಕ್ಷ ಜನ ಸೇರಿಸಿ ಹೋರಾಟ ಮಾಡಲು ಸಾಧ್ಯವಾಗುತ್ತದೆ ಎಂದರು.

ಕೂಡಲ ಸಂಗಮದ ಜಗದ್ಗುರು ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಲಿಂಗಾಯಿತರ 2ಎ ಮೀಸಲಾತಿ, ಪಾದಯಾತ್ರೆ, ಹೋರಾಟ, ಈಗ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನದ ಮೂಲಕ ಮುಂದುವರಿಯುತ್ತಿದೆ. ರಾಜ್ಯದಲ್ಲಿ 3800 ಲಿಂಗಾಯತ ಮಠಗಳಿವೆ. ಆದರೆ ಮೀಸಲಾತಿ ಇಂದಿನ ಅತಿ ಅಗತ್ಯ ಎಂಬುದನ್ನು ನಾವು ಅರಿಯಬೇಕು ಎಂದರು.

ಇದನ್ನೂ ಓದಿ:ಗೋವಾ: ಪ್ರವಾಸಿಗನನ್ನು ದೋಚಿದ್ದ ಆರೋಪಿಗಳ ಬಂಧನ

Advertisement

ಗೌಡ ಲಿಂಗಾಯತ ಸಭಾ ರಾಜ್ಯಾಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಚ್‌.ಎಸ್‌
.ನಂಜಪ್ಪ, ಮುಖಂಡರಾದ ಎಸ್‌.ಪಿ.ಸುರೇಶ್‌, ಸಿದ್ದೇಶ್‌ ಬಾಬು(ಗೊಂಬೆ), ಡಾ.ಬಿ.ಎಸ್‌ .ಪಾಟೀಲ್‌ ನಾಗರಾಳ ಇತರಿದ್ದರು.

ಸಮುದಾಯ ಇನ್ನಾದರೂ ಎಚ್ಚೆತ್ತುಕೊಳ್ಳಲಿ:ಮಲ್ಲೇಶ್‌
ಗೌಡ ಲಿಂಗಾಯತ ಮುಂದುವರಿದ ಜಾತಿ ಎನ್ನುವುದಾದರೆ ಕೇಂದ್ರದ ಶೇ.10 ಮೀಸಲಾತಿ ಕೊಡಿ ಎಂದರೂ ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಹಿಂದುಳಿದವರು ಎಂಬ ಕಾರಣಕ್ಕೆ 2ಎ ಕೊಡಿ ಎಂದರೂ ಕೊಡುತ್ತಿಲ್ಲ. ಈಗ ಸಮುದಾಯಕ್ಕೆ ಮೀಸಲು ಪಡೆಯುವ ಅಗತ್ಯ ಕುತ್ತಿಗೆಗೆ ಬಂದಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಮೃತ್ಯುಂಜಯ ಸ್ವಾಮೀಜಿ ನಮ್ಮ ಆಶಾಕಿರಣವಾಗಿದ್ದಾರೆ. ತ್ಯಾಗ ಮನೋಭಾವ ಇರುವವರನ್ನು ಬೆಂಬಲಿಸೋಣ. ಜಿಲ್ಲೆಯ ಬಹುದಿನದ ಕನಸಿನ ಕಬಿನಿ 2ನೇ ಹಂತದ ಯೋಜನೆಗೆ ಹೋರಾಡೋಣ ಎಂದು ಗೌಡ ಲಿಂಗಾಯಿತ ಸಂಘಟನೆ ಸಂಚಾಲಕ ಅಮ್ಮನಪುರ ಮಲ್ಲೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next