Advertisement

ಅಮೆರಿಕ ಮಾದರಿ ವಾಯುದಳ ಹೋರಾಟಕ್ಕೆ ಭಾರತ ತಯಾರಿ

05:05 AM May 14, 2018 | Karthik A |

ಜೈಪುರ : ಅಮೆರಿಕ ಸೇನೆಯು ವಿಯೆಟ್ನಾಂ ಯುದ್ಧದಲ್ಲಿ ಬಳಸಿದ ವಾಯುದಳ (ಏರ್‌ ಕ್ಯಾವಲರಿ) ಮಾದರಿಯ ಹೋರಾಟದ ತರಬೇತಿಯನ್ನು ಭಾರತೀಯ ಸೇನೆ ನಡೆಸಿದೆ. ರಾಜಸ್ಥಾನದ ಸೂರತ್‌ಗಡದ ಉರಿಬಿಸಿಲಿನಲ್ಲಿ ಈ ಪ್ರಯೋಗ ನಡೆಸಲಾಗಿದ್ದು, ಇದರಿಂದ ಯುದ್ಧದ ಸಂದರ್ಭದಲ್ಲಿ ಭೂಸೇನೆಯ ಜೊತೆಗೇ ವಾಯುಪಡೆ ಕೂಡ ಕೆಲಸ ಮಾಡಲಿದೆ. ಇದರಿಂದ ಶತ್ರುಗಳನ್ನು ಸದೆಬಡಿಯುವುದು ಸುಲಭವಾಗಲಿದೆ.

Advertisement

ವಿಜಯ್‌ ಪ್ರಹಾರ್‌: ಸಾಮಾನ್ಯವಾಗಿ ಯುದ್ಧ ಅಥವಾ ಪ್ರತಿದಾಳಿ ಸಂದರ್ಭದಲ್ಲಿ ಭೂಸೇನೆಗೆ ನಿಲುಕದ ಪ್ರದೇಶದಲ್ಲಿ ವಾಯುಪಡೆಯ ಹೆಲಿಕಾಪ್ಟರುಗಳು ದಾಳಿ ನಡೆಸುತ್ತವೆ. ಆದರೆ ಏರ್‌ ಕ್ಯಾವಲರಿ ಶೈಲಿಯ ಹೋರಾಟದಲ್ಲಿ ಭೂಸೇನೆಯ ಜೊತೆಗೇ ವಾಯುಪಡೆಯೂ ಕಾರ್ಯನಿರ್ವಹಿಸುತ್ತದೆ. ಶಸ್ತ್ರಸಜ್ಜಿತ ಹೆಲಿಕಾಪ್ಟರ್‌ ಗಳು ಭೂಸೇನೆಯೊಂದಿಗೆ ಸಂವಹನ ನಡೆಸಿ, ನಿಗದಿತ ಸ್ಥಳದ ಮೇಲೆ ದಾಳಿ ನಡೆಸುವುದು ಹಾಗೂ ಭೂಸೇನೆ ಮುಂದುವರಿಯಲು ನೆರವು ನೀಡುವುದು, ಶತ್ರುಗಳ ಸ್ಥಿತಿಯ ಬಗ್ಗೆ ವಿವರ ನೀಡುವುದನ್ನು ಹೆಲಿಕಾಪ್ಟರ್‌ಗಳು ಮಾಡುತ್ತವೆ. ಇದಕ್ಕೆ ಉತ್ತಮ ಸಂವಹನ ಹಾಗೂ ನಿಖರತೆ ಅಗತ್ಯವಿದ್ದು, ಕಾಲಕಾಲಕ್ಕೆ ಭೂಸೇನೆ ಹಾಗೂ ವಾಯುಪಡೆಗಳು ಅಪ್‌ ಡೇಟ್‌ ಆಗಬೇಕಿರುತ್ತವೆ. ಇದರಿಂದ ಸೇನೆ ತನ್ನ ಗುರಿಯನ್ನು ತ್ವರಿತವಾಗಿ ಸಾಧಿಸಬಹುದು ಹಾಗೂ ಶತ್ರುಗಳನ್ನು ಶೀಘ್ರವಾಗಿ ಸದೆಬಡಿಯಬಹುದು. ಯುದ್ಧ ಅಥವಾ ದಾಳಿಯ ತಂತ್ರಗಳ ಪೈಕಿ ಇದನ್ನು ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಈ ವಿಧಾನವನ್ನು 1974-75ರಲ್ಲಿ ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕ ಬಳಸಿತ್ತು. ಕಡಿದಾದ ಕಾಡಿನಲ್ಲಿ ಭೂ ಸೇನೆ ಮುನ್ನುಗ್ಗಲು ಹೆಲಿಕಾಪ್ಟರ್‌ಗಳು ತುಂಬಾ ನೆರವಾಗಿದ್ದವು. ಇದನ್ನು ಬಳಸುವುದಕ್ಕಾಗಿಯೇ ಸೇನೆ ಹಲವು ವರ್ಷಗಳಿಂದಲೂ ಆಧುನಿಕ ಸೆನ್ಸಾರ್‌ ಹಾಗೂ ನಿಖರ ಆಯುಧಗಳನ್ನು ಒಳಗೊಂಡಿರುವ ಕಾಪ್ಟರ್‌ಗಳ ಖರೀದಿ ಮಾಡುತ್ತಿತ್ತು. ವಿಶೇಷವಾಗಿ ಗುಡ್ಡಗಾಡು ಪ್ರದೇಶದಲ್ಲಿ ಇದು ಹೆಚ್ಚು ಅನುಕೂಲರವಾಗಿರುವುದರಿಂದ ಭಾರತ-ಪಾಕ್‌ ಗಡಿಯಲ್ಲಿ ಇದು ಹೆಚ್ಚು ಅನುಕೂಲಕ್ಕೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next