Advertisement

Yashasvi Jaiswal ವಿಶ್ವಾಸ; ನಾವು ಬಲಿಷ್ಠರಾಗಿ ಬರುವೆವು…

12:07 AM Jan 07, 2025 | Team Udayavani |

ಹೊಸದಿಲ್ಲಿ: “ನಾನು ಆಸ್ಟ್ರೇಲಿಯ ಪ್ರವಾಸದಲ್ಲಿ ಸಾಕಷ್ಟು ಕಲಿತೆ, ಬಲಿಷ್ಠರಾಗಿ ಮರಳಲಿದ್ದೇವೆ…’ ಹೀಗೊಂದು ವಿಶ್ವಾಸ ವ್ಯಕ್ತಪಡಿಸಿದವರು, ಭಾರತದ ಪರ ಸರಣಿಯಲ್ಲೇ ಸರ್ವಾಧಿಕ ರನ್‌ ಬಾರಿಸಿದ ಆರಂಭಕಾರ ಯಶಸ್ವಿ ಜೈಸ್ವಾಲ್‌.

Advertisement

“ನಾನು ಆಸ್ಟ್ರೇಲಿಯ ಪ್ರವಾಸದಲ್ಲಿ ಸಾಕಷ್ಟು ಕಲಿತೆ. ದುರದೃಷ್ಟವಶಾತ್‌ ಫ‌ಲಿತಾಂಶ ನಾವೆಣಿಸಿದಂತೆ ಬರಲಿಲ್ಲ. ಆದರೆ ನಾವು ಬಲಿಷ್ಠರಾಗಿ ಮರಳಲಿದ್ದೇವೆ. ನಿಮ್ಮ ಬೆಂಬಲಕ್ಕಿಂತ ಮಿಗಿಲಾದುದಿಲ್ಲ’ ಎಂದು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬರೆದಿದ್ದಾರೆ.

23 ವರ್ಷದ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ 43.44ರ ಸರಾಸರಿಯಲ್ಲಿ 391 ರನ್‌ ಬಾರಿಸಿ ಮಿಂಚಿದ್ದರು. ಪರ್ತ್‌ ಟೆಸ್ಟ್‌ನಲ್ಲಿ 161 ರನ್‌ ಹೊಡೆದ ಹಿರಿಮೆ ಇವರದಾಗಿತ್ತು. ಈ ಪಂದ್ಯವನ್ನು ಭಾರತ 295 ರನ್ನುಗಳಿಂದ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next