Advertisement

Sandalwood: ಸ್ವಾತಂತ್ರ್ಯ ದಿನಕ್ಕೆ ದುನಿಯಾ ವಿಜಿ ನಿರ್ದೇಶನದ ʼಭೀಮʼ ರಿಲೀಸ್?‌

02:30 PM Jun 19, 2024 | Team Udayavani |

ಬೆಂಗಳೂರು: ದುನಿಯಾ ವಿಜಯ್‌ ನಿರ್ದೇಶನದ ʼಭೀಮʼ ಸೆಟ್ಟೇರಿದ ಬಳಿಕ ಆಗಾಗ ಚಂದನವನದಲ್ಲಿ ಸದ್ದು ಮಾಡಿದೆ. ಪೋಸ್ಟರ್‌, ಹಾಡುಗಳಿಂದ ಗಮನ ಸೆಳೆದ ಬಳಿಕ ಇದೀಗ ರಿಲೀಸ್‌ ಡೇಟ್‌ ನತ್ತ ಚಿತ್ರತಂಡ ಗಮನ ಹರಿಸಿದೆ.

Advertisement

ʼಭೀಮʼ ʼಸಲಗʼ ಬಳಿಕ ದುನಿಯಾ ವಿಜಿ ನಿರ್ದೇಶನ ಮಾಡುತ್ತಿರುವ 2ನೇ ಚಿತ್ರವಾಗಿರುವ ಕಾರಣ ಕುತೂಹಲ ಹೆಚ್ಚಿಸಿದೆ. ʼಸಲಗʼ ಪ್ರೇಕ್ಷಕರ ಮನಗೆದ್ದಿತ್ತು.

ಚಿತ್ರೀಕರಣ ಬಹುತೇಕ ಮುಕ್ತಾಯಗೊಳಿಸಿದ ʼಭೀಮʼ ಈಗ ರಿಲೀಸ್‌ ಗೆ ಪ್ಲ್ಯಾನ್‌ ಹಾಕಿಕೊಂಡಿದೆ. ಶಿವರಾಜ್‌ ಕುಮಾರ್‌ ಅವರ ʼಭೈರತಿ ರಣಗಲ್‌ʼ ಹಾಗೂ ಪ್ಯಾನ್‌ ಇಂಡಿಯಾ ʼಪುಷ್ಪ-2ʼ ರಿಲೀಸ್‌ ಆ.15 ರಂದು ರಿಲೀಸ್‌ ಆಗಬೇಕಿತ್ತು. ಆದರೆ ಎರಡೂ ಸಿನಿಮಾಗಳ ಕೆಲಸ ಇನ್ನೂ ಬಾಕಿ ಉಳಿದಿದ್ದು, ಇದರಲ್ಲಿ ʼಪುಷ್ಪ-2ʼ ಆ.15 ರಿಂದ ಡಿ.6 ಕ್ಕೆ ಮುಂದೂಡಿಕೆ ಆಗಿದೆ. ಇನ್ನು ಶಿವರಾಜ್‌ ಕುಮಾರ್‌ ಅವರ ʼಭೈರತಿ ರಣಗಲ್‌ʼ ಕೂಡ ಮುಂದೂಡಿಕೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ಹೀಗಾಗಿ ಸ್ವಾತಂತ್ರ್ಯ ದಿನದಂದು ʼಭೀಮʼ ರಿಲೀಸ್‌ ಗೆ ಚಿತ್ರತಂಡ ಪ್ಲ್ಯಾನ್‌ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಮಾಹಿತಿ ಹೊರಬೀಳಲಿದೆ.

ಕೃಷ್ಣ ಸಾರ್ಥಕ್‌, ಜಗದೀಶ್‌ ಗೌಡ ನಿರ್ಮಾಣದ ʼಭೀಮʼ ಚಿತ್ರಕ್ಕೆ ಚರಣ್‌ ರಾಜ್‌ ಮ್ಯೂಸಿಕ್‌ ನೀಡಿದ್ದಾರೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

Advertisement

ದುನಿಯಾ ವಿಜಯ್‌ಗೆ ನವ ಪ್ರತಿಭೆ ಅಶ್ವಿನಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬ್ಲ್ಯಾಕ್ ಡ್ರ್ಯಾಗನ್ ಮಂಜು, ಅಚ್ಯುತ್ ಕುಮಾರ್, ರಂಗಾಯಣ ರಘು, ಗಿರಿಜಾ ಮತ್ತು ಕಲ್ಯಾಣಿ ರಾಜು ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next