Advertisement

Bigg Boss Tamil 8: ತಮಿಳು ಬಿಗ್‌ ಬಾಸ್‌ಗೆ ನಿರೂಪಕನಾಗಿ ಆಗಿ ಎಂಟ್ರಿ ಕೊಟ್ಟ ʼಮಹಾರಾಜʼ

12:56 PM Sep 05, 2024 | Team Udayavani |

ಚೆನ್ನೈ: ಬಿಗ್ ಬಾಸ್‌ ತಮಿಳು ಸೀಸನ್‌ -8 (Bigg Boss Tamil-8) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕಾರ್ಯಕ್ರಮದ ಟೀಸರ್‌ ನೊಂದಿಗೆ ಹೊಸ ನಿರೂಪಕರನ್ನು ಆಯೋಜಕರು ಪರಿಚಯಿಸಿದ್ದಾರೆ.

Advertisement

ಕಳೆದ 7 ಸೀಸನ್‌ ಗಳಿಂದ ಬಿಗ್‌ ಬಾಸ್‌ ತಮಿಳು ಶೋವನ್ನು ನಿರೂಪಣೆ ಮಾಡುತ್ತಾ ಬರುತ್ತಿದ್ದ ಕಮಲ್ ಹಾಸನ್ (KAMAL HASAN) ಈ ಬಾರಿ ಅವರು ನಿರೂಪಣೆಯಿಂದ ಬ್ರೇಕ್‌ ಪಡೆದುಕೊಂಡಿರುವುದಾಗಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹೊಸ ಹೋಸ್ಟ್‌ ಯಾರು ಎನ್ನುವುದು ಕುತೂಹಲದ ವಿಚಾರವಾಗಿತ್ತು. ಅದರಂತೆ ಇದೀಗ ಹೊಸ ಹೋಸ್ಟ್‌ ಯಾರು ಎನ್ನುವುದನ್ನು ವೀಕ್ಷಕರಿಗೆ ಆಯೋಜಕರು ಪರಿಚಯಿಸಿದ್ದಾರೆ.

ಕಮಲ್‌ ಹಾಸನ್‌ ಬಳಿಕ ಅವರ ಜಾಗಕ್ಕೆ ಖ್ಯಾತ ನಟ ವಿಜಯ್‌ ಸೇತುಪತಿ (Vijay Sethupathi) ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಈ ಹಿಂದೆ ವರದಿಯಾಗಿತ್ತು. ಈ ಸುದ್ದಿ ಈಗ ಅಧಿಕೃತವಾಗಿದೆ. ವಿಜಯ್‌ ಸೇತುಪತಿ ಬಿಗ್‌ ಬಾಸ್‌ ತಮಿಳು -8 ನಡೆಸಿಕೊಡಲಿದ್ದಾರೆ.

Advertisement

ವಿಜಯ್‌ ಸೇತುಪತಿ ಸ್ಟೈಲಿಸ್ಟ್‌ ಆಗಿ ಎಂಟ್ರಿ ಕೊಡುವ ಲುಕ್‌ ನಲ್ಲಿ ಬಿಗ್‌ ಬಾಸ್‌ ತಮಿಳು -8 ಟೀಸರ್‌ ನ್ನು ವಿಜಯ್‌ ವಾಹಿನಿ ರಿಲೀಸ್‌ ಮಾಡಿದೆ. ಆ ಮೂಲಕ ಇಷ್ಟು ದಿನ ಇದ್ದ ಕುತೂಹಲಕ್ಕೆ ತೆರೆ ಎಳೆದಿದೆ.

ಕಾರ್ಯಕ್ರಮ ಯಾವಾಗದಿಂದ ಆರಂಭವೆನ್ನುವುದನ್ನು ಇನ್ನು ಕೂಡ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಅಕ್ಟೋಬರ್‌ ತಿಂಗಳಿನಲ್ಲಿ ಶೋ ಶುರುವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.