Advertisement

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಸೂಪರ್‌ ಹಿಟ್ ʼಜವಾನ್‌ʼ

06:14 PM Sep 12, 2024 | Team Udayavani |

ಮುಂಬಯಿ: ಕಿಂಗ್‌ ಖಾನ್ ಶಾರುಖ್‌ ಖಾನ್‌ (ShahRukhKhan) – ಅಟ್ಲಿ ಕುಮಾರ್(Atlee Kumar) ಅವರ ʼಜವಾನ್‌ʼ (Jawan) ಸಿನಿಮಾ ಮತ್ತೊಮ್ಮೆ ಬಿಗ್‌ ಸ್ಕ್ರೀನ್‌ ಮೋಡಿ ಮಾಡಲು ಸಿದ್ದವಾಗಿದೆ. ಬಹಳ ಅದ್ಧೂರಿಯಿಂದಲೇ ʼಜವಾನ್‌ʼ ಮತ್ತೆ ಥಿಯೇಟರ್ ನಲ್ಲಿ ತೆರೆ ಕಾಣಲಿದೆ.

Advertisement

2023ರ ಸೆ.7 ರಂದು ʼಜವಾನ್‌ʼ ಗ್ರ್ಯಾಂಡ್‌ ಆಗಿ ರಿಲೀಸ್‌ ಆಗಿತ್ತು. ಬಾಲಿವುಡ್‌ ನಲ್ಲಿ ಆ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ʼಜವಾನ್‌ʼ ಹೊರಹೊಮ್ಮಿತ್ತು.

1000 ಕೋಟಿ ಗಳಿಸಿ ಶಾರುಖ್‌ ಖಾನ್‌ ಅವರಿಗೆ ಮತ್ತೊಂದು ದೊಡ್ಡ ಹಿಟ್‌ ಕೊಟ್ಟಿದ್ದ ʼಜವಾನ್‌ʼ ಇದೀಗ ವಿದೇಶದಲ್ಲಿ ರಿಲೀಸ್‌ ಆಗಲು ಸಜ್ಜಾಗಿದೆ. ಭಾರತೀಯ ಸಿನಿಮಾಗಳಿಗೆ ಹೆಚ್ಚಿನ ಪ್ರೇಕ್ಷಕರಿರುವ ಜಪಾನ್‌ನಲ್ಲಿ ʼಜವಾನ್‌ʼ ಅದ್ಧೂರಿಯಾಗಿ ತೆರೆ ಕಾಣಲಿದೆ.

content-img

ಜಪಾನ್‌ನಲ್ಲಿ ʼಜವಾನ್‌ʼ ರಿಲೀಸ್‌ ಆಗಲಿರುವ ಬಗ್ಗೆ ಶಾರುಖ್‌ ಹೊಸ ಪೋಸ್ಟರ್‌ ಹಂಚಿಕೊಂಡು ʼಜವಾನ್‌ ನೋಡಲು ರೆಡಿನಾ?” ಎಂದು ಜಪಾನೀಸ್‌ ಫ್ಯಾನ್ಸ್‌ ಗಳಿಗೆ ಕೇಳಿದ್ದಾರೆ.

Advertisement

ಇದೇ ನವೆಂಬರ್‌ 29ರಂದು ʼಜವಾನ್‌ʼ ಜಪಾನ್‌ ದೇಶದಲ್ಲಿ ರಿಲೀಸ್‌ ಆಗಲಿದೆ.

ಚಿತ್ರದಲ್ಲಿ ಶಾರುಖ್‌ ಜೊತೆ ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ನಯನತಾರಾ, ಸುನಿಲ್ ಗ್ರೋವರ್, ರಿಧಿ ಡೋಗ್ರಾ, ಐಜಾಜ್ ಖಾನ್, ಲೆಹರ್ ಖಾನ್, ಆಲಿಯಾ ಖುರೇಷಿ, ಸಂಜೀತಾ ಭಟ್ಟಾಚಾರ್ಯ ಮುಂತಾದವರು ನಟಿಸಿದ್ದಾರೆ.

ಭಾರತದ ಸಿನಿಮಾಗಳಿಗೆ ವಿದೇಶದಲ್ಲೂ ಪ್ರೇಕ್ಷಕರಿದ್ದಾರೆ. ಜಪಾನ್‌ ನಲ್ಲಿ ಈ ಹಿಂದೆ ‘ಆರ್‌ ಆರ್‌ ಆರ್‌ʼ ಚಿತ್ರ ಜಪಾನ್‌ ನಲ್ಲಿ ರಿಲೀಸ್‌ ಆಗಿತ್ತು. ಇದೀಗ ಶಾರುಖ್‌ ಅವರ ʼಜವಾನ್‌ʼ ಚಿತ್ರ ಜಪಾನ್‌ ನಲ್ಲಿ ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.