Advertisement

The GOAT Twitter Review: ಹೇಗಿದೆ ದಳಪತಿ ವಿಜಯ್‌ ʼಗೋಟ್‌ʼ?; ನೋಡಿದವರು ಏನಂತಾರೆ?

06:36 PM Sep 05, 2024 | Team Udayavani |

ಚೆನ್ನೈ: ದಳಪತಿ ವಿಜಯ್‌ (Thalapathy Vijay) ಅಭಿಮಾನಿಗಳಿಗಿಂದು ಹಬ್ಬ. ತನ್ನ ನೆಚ್ಚಿನ ನಟನ ʼದಿ ಗೋಟ್‌ʼ(The GOAT) ಸಿನಿಮಾ ನೋಡಲು ಅಭಿಮಾನಿಗಳು ಫಸ್ಟ್‌ ಡೇ ಫಸ್ಟ್‌ ಶೋ ನೋಡಲೆಂದು ಥಿಯೇಟರ್‌ ಮುಂದೆ ಜಮಾಯಿಸಿದ್ದಾರೆ.

Advertisement

ದಳಪತಿ ವಿಜಯ್‌ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಬಂದ ಮೊದಲ ಸಿನಿಮಾ ʼಗೋಟ್.‌ ಇದಾದ ಬಳಿಕ ಅವರ ಮತ್ತೊಂದು ಚಿತ್ರ ತೆರೆಗೆ ಬರಲಿದೆ. ಆ ಬಳಿಕ ವಿಜಯ್‌ ಸಂಪೂರ್ಣವಾಗಿ ರಾಜಕೀಯದಲ್ಲೇ ಮುಂದುವರೆಯಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಹೇಳಿದ್ದೇನು?, ʼಗೋಟ್‌ʼ ಹೇಗಿದೆ ಎನ್ನುವುದನ್ನು ಕೆಲ ಪ್ರೇಕ್ಷಕರು ʼಎಕ್ಸ್‌ʼ ನಲ್ಲಿ ಬರೆದುಕೊಂಡಿದ್ದಾರೆ.

ಟ್ವಿಟರ್‌ ರಿವ್ಯೂ.. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಚಿತ್ರದ ಕಥೆ, ಚಿತ್ರಕಥೆ, ಸಾಹಸ ಸನ್ನಿವೇಶಗಳು, ಪಾತ್ರವರ್ಗದ ಪ್ರದರ್ಶನಗಳು, ಮತ್ತು, ಮುಖ್ಯವಾಗಿ ವೆಂಕಟ್ ಪ್ರಭು ಅವರ  ನಿರ್ದೇಶನವನ್ನು ಮೆಚ್ಚಿಕೊಂಡಿದ್ದು ಇನ್ನು ಕೆಲವರು ನೇರವಾಗಿಯೇ ಸಿನಿಮಾ ತಮಗೆ ಇಷ್ಟವಾಗಿಲ್ಲವೆಂದು ಬರೆದುಕೊಂಡಿದ್ದಾರೆ. ಇಲ್ಲಿದೆ ಕೆಲ ಟ್ವಿಟರ್‌ ರಿವ್ಯೂ..

“ಸಿನಿಮಾದ ಮೊದಲಾರ್ಧ ಚೆನ್ನಾಗಿದೆ. ಸೆಕೆಂಡ್‌ ಹಾಫ್‌ ಹೆಚ್ಚಿನ ಮನರಂಜನೆಯನ್ನು ನೀಡುತ್ತದೆ. ಕ್ಲೈಮ್ಯಾಕ್ಸ್‌ ಅಂತೂ ಅದ್ಭುತವಾಗಿದೆ” ಎಂದು ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.

Advertisement

ಮೊದಲಾರ್ಧ ಉತ್ತಮವಾಗಿದೆ. ಸೆಕೆಂಡ್‌ ಹಾಫ್ ತೃಪ್ತಿಕರವಾಗಿದೆ. ರಿವ್ಯೂ ಬಿಡಿ ಸಿನಿಮಾವನ್ನು ಎಂಜಾಯ್‌ ಮಾಡಿ. ಕೊನೆಗೂ ದಳಪತಿ ಚಿತ್ರವೊಂದು ಒಳ್ಳೆಯ ಕಥೆಯೊಂದಿಗೆ ಬಂದಿದೆ” ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಈ ಹಿಂದೆ ʼಮಾನಾಡುʼ ನಿರ್ದೇಶಿಸಿದ ವೆಂಕಟ್‌ ಪ್ರಭು ಈ ಸಿನಿಮಾದಲ್ಲಿ ತನ್ನ ಬೆಸ್ಟ್‌ ನೀಡಲು ವಿಫಲರಾಗಿದ್ದಾರೆ. ಒಟ್ಟಿನಲ್ಲಿ ಇದೊಂದು ಒಳ್ಳೆಯ ಕಮರ್ಷಿಯಲ್ ಚಿತ್ರವೆಂದು 5 ರಲ್ಲಿ 2.5 ರೇಟಿಂಗ್‌ ನೀಡಿದ್ದಾರೆ.

ಸೆಕೆಂಡ್‌ ಹಾಫ್‌ ಸರ್ಪೈಸ್‌ ಆಗಿದೆ. ಟ್ವಿಸ್ಟ್‌ ಹಾಗೂ ಟರ್ನ್‌ ನೊಂದಿಗೆ ಇದು ದಳಪತಿ ವಿಜಯ್‌ ಅವರ ಶೋವೆಂದು ಒಬ್ಬರು ಬರೆದುಕೊಂಡಿದ್ದಾರೆ.

ಎಲ್ಲ ನಿರೀಕ್ಷೆಗಳನ್ನು ಮೀರಿದ ಕಮರ್ಷಿಯಲ್ ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ. ಎಂಗೇಜಿಂಗ್ ಫಸ್ಟ್ ಹಾಫ್, ಪೀಕ್ ಸೆಕೆಂಡ್ ಹಾಫ್, ಬ್ಯಾಂಗರ್ ಕ್ಲೈಮ್ಯಾಕ್ಸ್. ಇಂಟ್ರೆಸ್ಟಿಂಗ್ ಕ್ಯಾಮಿಯೋಸ್ ಡೀಜಿಂಗ್ ವರ್ಕ್ ತುಂಬಾ ಚೆನ್ನಾಗಿದೆ ಒಟ್ಟಿನಲ್ಲಿ ದಳಪತಿ ವಿಜಯ್ ಶೋ ಎಂದು ಬರೆದುಕೊಂಡಿದ್ದಾರೆ.

ಸಿನಿಮಾವನ್ನು ನೋಡಿದ ಬಳಿಕ ಮತ್ತೊಬ್ಬರು ಬಹಳ ನಿರಾಶರಾಗಿದ್ದು, “ಗೋಟ್”‌ ನೋಡಿ ಬಹಳ ಬೇಸರಗೊಂಡಿದ್ದೇನೆ. ವಿಶೇಷವಾಗಿ ಸಿನಿಮಾದ ಎರಡನೇ ಭಾಗ. ವಿಜಯ್ ಅವರ ಸ್ಟಾರ್ ಪವರ್ ಇದ್ರು ಕೂಡ ಕಥಾವಸ್ತು ಅದನ್ನು ಉಳಿಸಲು ಸಾಧ್ಯವಾಗಿಲ್ಲ” ಎಂದು ಬರೆದುಕೊಂಡಿದ್ದಾರೆ.

#MrBachchan ಗಿಂತ ಕೆಟ್ಟದಾಗಿ ಸಿನಿಮಾ ಮೂಡಿಬಂದಿದೆ. ಕನಿಷ್ಠ ಮಿ. ಬಚ್ಚನ್‌ನಲ್ಲಿ ನಾಯಕಿಯಾದರೂ ಇದ್ದಾರೆ, ಇದರಲ್ಲಿ ಅದೂ ಇಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ದಳಪತಿ ವಿಜಯ್ ಚಿತ್ರದಲ್ಲಿ ತಂದೆ ಮತ್ತು ಅವರ ಮಗನಾಗಿ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 2004ರ ಮಾಸ್ಕೋ ಮೆಟ್ರೋ ಬಾಂಬ್ ದಾಳಿಯನ್ನು ಆಧರಿಸಿದೆ ಎನ್ನಲಾಗಿದೆ. ವಿಜಯ್ ಅವರು ವಿಶೇಷ ಭಯೋತ್ಪಾದನಾ ನಿಗ್ರಹ ದಳದ (SATS) ಏಜೆಂಟ್ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ವಿಜಯ್‌ ಜತೆ ಪ್ರಶಾಂತ್, ಪ್ರಭುದೇವ, ಅಜ್ಮಲ್ ಅಮೀರ್, ಮೋಹನ್, ಜಯರಾಮ್, ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ವೈಭವ್, ಯೋಗಿ ಬಾಬು, ಪ್ರೇಮ್ಗಿ ಅಮರೇನ್ ಮತ್ತು ಯುಗೇಂದ್ರನ್ ಮುಂತಾದವರು ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next