Advertisement

City Lights Kannada Movie: ವಿಜಯ್‌ ‘ಸಿಟಿ ಲೈಟ್ಸ್‌’ಗೆ ವಿನಯ್‌ ಹೀರೋ

11:51 AM Sep 24, 2024 | Team Udayavani |

“ಭೀಮ’ ಸಿನಿಮಾದ ದೊಡ್ಡ ಗೆಲುವಿನ ಬೆನ್ನಲ್ಲೇ ನಟ, ನಿರ್ದೇಶಕ ವಿಜಯ್‌ ಕುಮಾರ್‌ “ಸಿಟಿ ಲೈಟ್ಸ್‌’ ಎಂಬ ಸಿನಿಮಾವನ್ನು ಅನೌನ್ಸ್‌ ಮಾಡಿದ್ದರು. ಇದು ಅವರದ್ದೇ ನಿರ್ದೇಶನದ ಸಿನಿಮಾ. ಈ ಸಿನಿಮಾ ಮೂಲಕ ವಿಜಯ್‌ ಅವರ ಎರಡನೇ ಪುತ್ರಿ ಮೋನಿಷಾ ನಾಯಕಿಯಾಗಿ ಲಾಂಚ್‌ ಆಗುತ್ತಿದ್ದಾರೆ.

Advertisement

ಈಗ ಈ ಸಿನಿಮಾ ಕಡೆಯಿಂದ ಮತ್ತೊಂದು ಅಪ್‌ಡೇಟ್‌ ಬಂದಿದೆ. ಅದು ನಾಯಕನ ಕುರಿತಾಗಿ. ಚಿತ್ರದಲ್ಲಿ ವಿನಯ್‌ ರಾಜ್‌ಕುಮಾರ್‌ ನಾಯಕರಾಗಿ ನಟಿಸುತ್ತಿದ್ದಾರೆ.

ಚಿತ್ರತಂಡ ಸೋಮವಾರ ಅಧಿಕೃತ ಪೋಸ್ಟರ್‌ ಮೂಲಕ ವಿನಯ್‌ ರಾಜ್‌ಕುಮಾರ್‌ ಅವರನ್ನು ಸ್ವಾಗತಿಸಿದೆ.

ಇತ್ತೀಚೆಗಷ್ಟೇ ತೆರೆಕಂಡ “ಪೆಪೆ’ ಸಿನಿಮಾದ ಪ್ರಮೋಶನ್‌ಗೂ ವಿಜಯ್‌ ಸಾಥ್‌ ನೀಡಿದ್ದರು. ಚಿತ್ರದ ಕುರಿತಾಗಿ ವಿಶೇಷ ಸಂದರ್ಶನ ಕೂಡಾ ಮಾಡಿದ್ದರು. ಈಗ ವಿಜಯ್‌ ನಿರ್ದೇಶನದ ಸಿನಿಮಾದಲ್ಲಿ ವಿನಯ್‌ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಅಂದಹಾಗೆ, ಈಗಾಗಲೇ ವಿಜಯ್‌ ಮೊದಲ ಪುತ್ರಿ ಮೋನಿಕಾ (ರಿತನ್ಯಾ) ವಿಜಯ್‌ ನಟನೆಯ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಎರಡನೇ ಪುತ್ರಿ ಸರದಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next