Advertisement

Kollywood: ಹಿಟ್‌ ಲವ್‌ ಸ್ಟೋರಿ ʼ96ʼ ಸೀಕ್ವೆಲ್‌ ಕನ್ಫರ್ಮ್; ನಿರ್ದೇಶಕರು ಹೇಳಿದ್ದೇನು?

04:28 PM Sep 12, 2024 | Team Udayavani |

ಚೆನ್ನೈ: 2018ರಲ್ಲಿ ಕಾಲಿವುಡ್‌ನಲ್ಲಿ ʼ96ʼ (96 Movie) ಮೋಡಿ ಮಾಡಿತ್ತು. ವಿಜಯ್‌ ಸೇತುಪತಿ(Vijay Sethupathi) – ತ್ರಿಷಾ ಕೃಷ್ಣನ್‌(Trisha Krishnan) ಅವರ ಅಭಿನಯಕ್ಕೆ ಕಾಲಿವುಡ್‌ ಫಿದಾ ಆಗಿತ್ತು.

Advertisement

ಸಿ ಪ್ರೇಮ್ ಕುಮಾರ್( C Prem Kumar) ನಿರ್ದೇಶನದಲ್ಲಿ ಬಂದಿದ್ದ ʼ96ʼ ಕನ್ನಡ, ತೆಲುಗಿನಲ್ಲೂ ರಿಮೇಕ್‌ ಆಗಿ ಸದ್ದು ಮಾಡಿತ್ತು. ಇದೀಗ 6 ವರ್ಷದ ಬಳಿಕ ʼ96ʼ ಸಿನಿಮಾದ ಸೀಕ್ವೆಲ್‌ ಬಗ್ಗೆ ನಿರ್ದೇಶಕ ಪ್ರೇಮ್‌ ಕುಮಾರ್‌ ಮಾತನಾಡಿದ್ದಾರೆ.

ತಮಿಳು ಯೂಟ್ಯೂಬ್ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “96 ಭಾಗ- 2 ನಲ್ಲಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ಆರಂಭದಲ್ಲಿ, ನಾನು ’96’ ನ ಸೀಕ್ವೆಲ್ ಮಾಡಲು ಉತ್ಸುಕನಾಗಿರಲಿಲ್ಲ. ಆದರೆ ಯೋಚನೆಗಳು ಬದಲಾಗುತ್ತವೆ. ’96 ಪಾರ್ಟ್‌ – 2′ ಸ್ಕ್ರಿಪ್ಟ್  ಈಗಾಗಲೇ ಬರೆದು ಮುಗಿಸಿದ್ದೇನೆ. ಕೆಲವೇ ಕೆಲ ಭಾಗಗಳು ಮಾತ್ರ ಉಳಿದಿವೆ” ಎಂದು ಅವರು ಹೇಳಿದ್ದಾರೆ.

content-img

“ನಾನು ವಿಜಯ್ ಸೇತುಪತಿ ಅವರ ಪತ್ನಿಯೊಂದಿಗೆ ಕಥೆಯನ್ನು ಹಂಚಿಕೊಂಡಿದ್ದೇನೆ. ಅವರು ಅದನ್ನು ಇಷ್ಟಪಟ್ಟಿದ್ದಾರೆ. ಸೇತುಪತಿ ಮತ್ತು ತ್ರಿಶಾ ತಮ್ಮ ಡೇಟ್‌ಗಳನ್ನು ನಿಗದಿಪಡಿಸುತ್ತಾರೆಯೇ ಎಂದು ನಾನು ನೋಡಬೇಕು” ಎಂದು ಪ್ರೇಮ್‌ ಕುಮಾರ್‌ ಹೇಳಿದ್ದಾರೆ.

Advertisement

ʼ96ʼನಲ್ಲಿ ಸೇತುಪತಿ ರಾಮ್‌ ಆಗಿ ನಟಿಸಿದ್ದು, ತ್ರಿಷಾ ಜಾನು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 22 ವರ್ಷಗಳ ಬಳಿಕ ಇಬ್ಬರು ಸ್ಕೂಲ್‌ ಮೇಟ್‌ ಗಳು ಭೇಟಿ ಆಗುವ ಕ್ಷಣ ಹಾಗೂ ಹಿನ್ನೆಲೆಯ ಕಥೆಯನ್ನು ಚಿತ್ರ ಒಳಗೊಂಡಿದೆ.

ಸದ್ಯ ವಿಜಯ್‌ ಸೇತುಪತಿ ʼಬಿಗ್‌ ಬಾಸ್‌ ತಮಿಳು -8ʼ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದು, ಇದಾದ ಬಳಿಕ ‘ಗಾಂಧಿ ಟಾಕ್ಸ್ʼ, ‘ವಿಧುತಲೈ -2’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತ ತ್ರಿಷಾ ‘ವಿದಾ ಮುಯಾರ್ಚಿ’, ‘ವಿಶ್ವಂಭರ’, ‘ಐಡೆಂಟಿಟಿ’, ‘ರಾಮ್’, ಮತ್ತು ‘ಥಗ್ ಲೈಫ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.