Advertisement

ಶಾರದಾ ವಿದ್ಯಾನಿಕೇತನ: ಕಡ್ಡಾಯ ಕೃಷಿ ಪಾಠ ಉಪರಾಷ್ಟ್ರಪತಿ ಶ್ಲಾಘನೆ

03:40 AM Jun 29, 2018 | Karthik A |

ಉಳ್ಳಾಲ: ತಲಪಾಡಿಯ ದೇವಿನಗರದಲ್ಲಿರುವ ಶಾರದಾ ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್‌ ನಲ್ಲಿ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕಡ್ಡಾಯ ಕೃಷಿ ಪಾಠ ನೀಡುವ ಕ್ರಮವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶ್ಲಾಘಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದಾರೆ. ಪಾಠದಲ್ಲಿ ಕಲಿತ ಅಂಶಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಜಾರಿಗೆ ತರುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.

Advertisement

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ಶಾಲೆಯಲ್ಲಿ ಕೃಷಿ ಪಾಠಿದ್ದು, ಪ್ರಥಮ ಹಂತದಲ್ಲಿ ವಿದ್ಯಾರ್ಥಿಗಳು ಮೂರುವರೆ ಎಕರೆ ಪ್ರದೇಶದಲ್ಲಿ ಕೃಷಿಯನ್ನು ನಡೆಸಲಿದ್ದಾರೆ. ಪಠ್ಯದಲ್ಲಿ ಹೈನುಗಾರಿಕೆ, ಸಾವಯವ ಕೃಷಿ, ಹೂದೋಟ ನಿರ್ಮಾಣ, ಹಣ್ಣಿನ ಕೃಷಿ, ಭತ್ತದ ಕೃಷಿ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ಪ್ರಾಯೋಗಿಕವಾಗಿಯೂ ತರಬೇತಿ ಇರಲಿದೆ. ಇದಕ್ಕಾಗಿ ಶಾಲೆಯಲ್ಲಿ 7 ಮಂದಿ ಕೃಷಿ ಪದವೀಧರರನ್ನು ನೇಮಿಸಲಾಗಿದೆ. ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪಡೆದ ಒಬ್ಬರು ಉಪನ್ಯಾಸಕರು ಥಿಯರಿ ಕ್ಲಾಸ್‌ ನಡೆಸಿದರೆ, ಆರು ಮಂದಿ ಕೃಷಿ ಪದವಿ ಪಡೆದ ತರಬೇತುಧಾರರು ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣವನ್ನು ನೀಡುತ್ತಿದ್ದಾರೆ. ಈ ವಿಚಾರವನ್ನು ಉದಯವಾಣಿ ಜೂ.11ರಂದು ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next