Advertisement

ಮನುಷ್ಯರ ಬಳಕೆಗೆ ಪಶು ಔಷಧಿ ಪೂರೈಕೆ: ಪೊಲೀಸರಿಂದ ಕೇಸು

12:26 PM Nov 21, 2017 | Team Udayavani |

ಥಾಣೆ : ಪಶು ಔಷಧಿಯನ್ನು ಮನುಷ್ಯರ ಬಳಕೆಗೆ ಖರೀದಿಸಿ, ಮಾರಿದ ಆರೋಪದ ಮೇಲೆ ಪೊಲೀಸರು ನಾಲ್ಕು ವ್ಯಕ್ತಿಗಳು, ಒಂದು Medical Shop ಮತ್ತು ದಿಲ್ಲಿಯಲ್ಲಿರುವ ಒಂದು ಔಷಧ ಉತ್ಪಾದನಾ ಘಟಕದ ವಿರುದ್ಧ ಕೇಸು ದಾಖಲಿಸಿರುವುದಾಗಿ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Advertisement

ಆಹಾರ ಮತ್ತು ಔಷಧ ಆಡಳಿತೆಯ (ಎಫ್ಡಿಎ) ಅಧಿಕಾರಿಗಳು ನೀಡಿದ ದೂರನ್ನು ಆಧರಿಸಿ ಥಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಮನುಷ್ಯರ ಬಳಕೆಗೆ ನೀಡಲಾಗುತ್ತಿದ್ದ ಪಶು ಔಷಧಿಗಳನ್ನು ವಶಕ್ಕೆ ತೆಗೆದುಕೊಂಡರು. 

ಭಾರತೀಯ ದಂಡ ಸಂಹಿತೆ ಮತ್ತು ಔಷಧ ಹಾಗೂ ಪ್ರಸಾಧನ ನಿಯಂತ್ರಣ ಕಾಯಿದೆಯಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಎಂದು ಥಾಣೆ ಪೊಲೀಸ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಸುಖದಾ ನಾರ್‌ಕರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next