Advertisement

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

11:29 AM Nov 21, 2024 | Team Udayavani |

ಬೆಂಗಳೂರು: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ಮಾರಾಟ ಮಾಡುತ್ತಿದ್ದವರನ್ನು ಸೋಮ ವಾರ ಆಹಾರ ಸುರಕ್ಷತಾ ಹಾಗೂ ಗುಣಮಟ್ಟದ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು, ಅವರಿಂದ ನಿಷೇಧಿತ ಕಲರ್‌ ಕ್ಯಾಂಡಿ ತಯಾರಿಕ ಘಟಕದ ವಿವರ ಪಡೆದು ಬಂದ್‌ ಮಾಡಿಸಲಾಗಿದೆ.

Advertisement

ರಾಜ್ಯದಲ್ಲಿ ಕೃತಕ ಬಣ್ಣ ಬಳಸಿ ತಯಾರಿಸಲಾಗುವ ಕಲರ್‌ ಕಾಟನ್‌ ಕ್ಯಾಂಡಿ ಮಾರಾಟ ನಿಷೇಧವಾದ 8 ತಿಂಗಳ ಬಳಿಕ ಬೆಂಗಳೂರು ಸೇರಿದಂತೆ ವಿವಿಧೆಡೆಯಲ್ಲಿ ಕಲರ್‌ ಕಾಟನ್‌ ಮಾರಾಟ ಮತ್ತೆ ಗರಿಗೆದರಿತ್ತು. ಈ ಬಗ್ಗೆ ತಪಾಸಣೆ ನಡೆಸಿದ ಇಲಾಖೆಯು ಕಲರ್‌ ಕಾಟನ್‌ ಕ್ಯಾಂಡಿ ಮಾರಾಟ ಮಾಡುತ್ತಿದ್ದವರನ್ನು ಬುಧವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರಿಂದ ಕಲರ್‌ ಕಾಟನ್‌ ಕ್ಯಾಂಡಿ ಯಾವ ಪ್ರದೇಶದಿಂದ ನಗರದ ವಿವಿಧ ಭಾಗಕ್ಕೆ ಬರುತ್ತಿದೆ ಎನ್ನುವು ಮಾಹಿತಿ ಪಡೆದು, ಯಲ ಹಂಕ ದ ಕಲರ್‌ ಕಾಟನ್‌ ಕ್ಯಾಂಡಿ ತಯಾರಕ ಘಟಕಕ್ಕೆ ತೆರಳಿ, ಮಾಲಿಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಉದಯವಾಣಿ ಪತ್ರಿಕೆಯು ನ.19ರಂದು  “ಗೋಬಿ, ಕಾಟನ್‌ ಕ್ಯಾಂಡಿಯಲ್ಲಿ ಮತ್ತೆ ಕೃತಕ ಬಣ್ಣ!’ ಶೀರ್ಷಿಕೆಯಡಿ ರಾಜ್ಯದಲ್ಲಿ ಮತ್ತೆ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ಗರಿಗೆದರಿರುವ‌ ಕುರಿತು ವರದಿಯನ್ನು ಪ್ರಕಟಿಸಲಾಗಿತ್ತು. ವರದಿಯಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ಮಾರಾಟ ಮಾಡುತ್ತಿರುವ ಪ್ರದೇಶ ಹಾಗೂ ವ್ಯಕ್ತಿಯ ಫೋಟೋವನ್ನು ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಇಲಾಖೆಯು ಕಾಟನ್‌ ಕ್ಯಾಂಡಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ, ವ್ಯಾಪಾರಿಯನ್ನು ವಶಪಡಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next