Advertisement

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

08:53 PM Nov 25, 2024 | Team Udayavani |

ಜೆಡ್ಡಾ: ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ (IPL)  ಮೆಗಾ ಹರಾಜಿನಲ್ಲಿ (Mega Auction) ಸೋಮವಾರ(ನ25) 13 ವರ್ಷದ ವೈಭವ್‌ ಸೂರ್ಯವಂಶಿ (Vaibhav Suryavamshi) ಮಾರಾಟವಾಗಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 1.1 ಕೋಟಿ ರೂ.ಗೆ ಹರಾಜಾಗುವ ಮೂಲಕ ಕ್ರಿಕೆಟ್ ಲೋಕದ ಹುಬ್ಬೇರಿಸುವಂತೆ ಮಾಡಿದ್ದಾರೆ.

Advertisement

ನೋಂದಾಯಿಸಿಕೊಂಡಿದ್ದ ಆಟಗಾರರ ಪಟ್ಟಿಲ್ಲಿದ್ದ ಅತೀ ಕಿರಿಯ ಆಟಗಾರನಾಗಿ ಗುರುತಿಸಿ ಕೊಂಡು ಗಮನ ಸೆಳೆದಿದ್ದ ಅವರು ಕೋಟಿ ಮೊತ್ತ ದಾಟುವ ಮೂಲಕ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಾರೆ. ವೈಭವ್‌ ಸೂರ್ಯವಂಶಿ ಪಂದ್ಯ ಆಡಿದರೆ ಐಪಿಎಲ್ ಇತಿಹಾಸದಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಗೆಗೆ ಭಾಜನರಾಗಲಿದ್ದಾರೆ.

ಬಿಹಾರದ ವೈಭವ್ ಸೂರ್ಯವಂಶಿ ಯುಎಇಯಲ್ಲಿ ನಡೆದ ಮುಂಬರುವ 2024ರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಂಡರ್-19 ಏಷ್ಯಾಕಪ್‌ ಗಾಗಿ ಭಾರತ ಅಂಡರ್-19 ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಈಗಾಗಲೇ ಟಿ 20 ಲೀಗ್‌ನ ಇತಿಹಾಸದ ಭಾಗವಾಗಿದ್ದಾರೆ.

2011 ರಲ್ಲಿ ಜನಿಸಿದ ವೈಭವ್ 4 ನೇ ವಯಸ್ಸಿನಲ್ಲಿ ತಮ್ಮ ಕ್ರಿಕೆಟ್ ಪ್ರತಿಭೆಯನ್ನು ತೋರಿಸಲು ಪ್ರಾರಂಭಿಸಿದ. ವೈಭವ್ ತಂದೆ ಸಂಜೀವ್ ಅವರ ಉತ್ಸಾಹವನ್ನು ಗಮನಿಸಿದರು. ಮನೆಯ ಬಳಿ ಮಗನಿಗಾಗಿ ಸಣ್ಣ ಆಟದ ಮೈದಾನ ನಿರ್ಮಿಸಿದ್ದರು.

Advertisement

9 ನೇ ವಯಸ್ಸಿನಲ್ಲಿ, ವೈಭವ್ ಅವರ ತಂದೆ ಅವರನ್ನು ಹತ್ತಿರದ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಕ್ರಿಕೆಟ್ ಪ್ರತಿಭೆಯ ವಿಷಯದಲ್ಲಿ ವೈಭವ್ ತನ್ನ ವಯಸ್ಸಿಗಿಂತ ಸಾಕಷ್ಟು ಮುಂದಿದಿದ್ದರು.

“ಅಲ್ಲಿ ಎರಡೂವರೆ ವರ್ಷಗಳ ಕಾಲ ಅಭ್ಯಾಸ ಮಾಡಿದ ನಂತರ, ನಾನು ವಿಜಯ್ ಮರ್ಚೆಂಟ್ ಟ್ರೋಫಿಗಾಗಿ ಅಂಡರ್ -16 ಟ್ರಯಲ್ಸ್ ನೀಡಿದ್ದೇನೆ” ಎಂದು ಹೇಳಿದರು. “ನನ್ನ ವಯಸ್ಸಿನ ಕಾರಣ ನಾನು ಸ್ಟ್ಯಾಂಡ್‌ಬೈನಲ್ಲಿದ್ದೆ. ದೇವರ ದಯೆಯಿಂದ ನಾನು ಮಾಜಿ ರಣಜಿ ಆಟಗಾರ ಮನೀಶ್ ಓಜಾ ಸರ್ ಅವರ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದೆ. ಅವರು ನನಗೆ ಬಹಳಷ್ಟು ಕಲಿಸಿದ್ದಾರೆ ಮತ್ತು ನಾನು ಇಂದು ಏನಾಗಿದ್ದರೂ ಅದಕ್ಕೆ ಅವರೇ ಕಾರಣ” ಎನ್ನುತ್ತಾರೆ ವೈಭವ್‌ ಸೂರ್ಯವಂಶಿ.

ಬಿಹಾರ ಪರ ವಿನೂ ಮಂಕಡ್ ಟ್ರೋಫಿಯಲ್ಲಿ ಆಡಿದಾಗ ವೈಭವ್ ಕೇವಲ 12 ವರ್ಷ. ಕೇವಲ ಐದು ಪಂದ್ಯಗಳಲ್ಲಿ ಸುಮಾರು 400 ರನ್ ಗಳಿಸಿದರು. ಇದರಿಂದ ಬಿಹರ್ ಕ್ರಿಕೆಟ್‌ನಲ್ಲಿ ಬಹುಬೇಗ ಏರಿಕೆ ಕಂಡರು.
ಅವರ ಇತ್ತೀಚಿನ ಸಾಧನೆಯೆಂದರೆ, ಚೆನ್ನೈನಲ್ಲಿ ನಡೆದ ನಾಲ್ಕು ದಿನಗಳ ಪಂದ್ಯದಲ್ಲಿ ಆಸ್ಟ್ರೇಲಿಯಾದ U-19 ತಂಡದ ವಿರುದ್ಧ 58 ಎಸೆತಗಳ ಬಿರುಸಿನ ಶತಕ. ಇಲ್ಲಿ ಅವರು ದೊಡ್ಡ ಹೆಸರು ಮಾಡಿದರು.

ವೈಭವ್ ಅವರು ನವೆಂಬರ್ 2023 ರಲ್ಲಿ ಆಂಧ್ರಪ್ರದೇಶದ ಮುಲಪಾಡುದಲ್ಲಿ ನಡೆದ ಅಂಡರ್-19 ಚತುರ್ಭುಜ ಸರಣಿಗಾಗಿ ಭಾರತ ಬಿ U-19 ತಂಡದ ಭಾಗವಾಗಿದ್ದರು. ಸರಣಿಯಲ್ಲಿ ಅಷ್ಟೇನೂ ಪ್ರದರ್ಶನ ನೀಡಲಿಲ್ಲ.
ವೈಭವ್ ಈ ವರ್ಷದ ಜನವರಿಯಲ್ಲಿ ಪಾಟ್ನಾದಲ್ಲಿ ಮುಂಬೈ ವಿರುದ್ಧ ಬಿಹಾರದ ರಣಜಿ ಟ್ರೋಫಿ 2023-24 ಎಲೈಟ್ ಗ್ರೂಪ್ ಬಿ ಹಣಾಹಣಿಯಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. 12 ವರ್ಷ ಮತ್ತು 284 ದಿನಗಳಲ್ಲಿ, ಅವರು 1986 ರಿಂದ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನು ಮಾಡಿದ ಅತ್ಯಂತ ಕಿರಿಯ ಭಾರತೀಯರಾದರು. ಬಿಹಾರಕ್ಕಾಗಿ ರಣಜಿ ಟ್ರೋಫಿ ಆಟದಲ್ಲಿ ಕಾಣಿಸಿಕೊಂಡ ಎರಡನೇ ಕಿರಿಯ ಆಟಗಾರರಾದರು.

Advertisement

Udayavani is now on Telegram. Click here to join our channel and stay updated with the latest news.

Next