Advertisement

Mumbai: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ʻಜೂನಿಯರ್ ಮೆಹಮೂದ್ʼ ನಿಧನ

08:27 AM Dec 08, 2023 | Team Udayavani |

ಮುಂಬೈ: 70ರ ದಶಕದಲ್ಲಿ ತಮ್ಮ ನಟನೆ ಮತ್ತು ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ನಟ ಜೂನಿಯರ್ ಮೆಹಮೂದ್ ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

Advertisement

ಹೊಟ್ಟೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮೆಹಮೂದ್ ಅವರು ಇಂದು (ಡಿಸೆಂಬರ್ 8ರ) ಮುಂಜಾನೆ 2 ಗಂಟೆಗೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಶುಕ್ರವಾರದ ಪ್ರಾರ್ಥನೆಯ ನಂತರ ಜುಹು ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.

ಮೆಹಮೂದ್ ಅವರು ಪತ್ನಿ, ಇಬ್ಬರು ಪುತ್ರರು, ಸೊಸೆ ಮತ್ತು ಮೊಮ್ಮಗನನ್ನು ಅಗಲಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮೆಹಮೂದ್:
ಜೂನಿಯರ್ ಮೆಹಮೂದ್ ಅವರು ಕಳೆದ ಎರಡು ತಿಂಗಳಿನಿಂದ ಅನರೀಗ್ಯಕ್ಕೆ ಒಳಗಾಗಿದ್ದು ಈ ಕುರಿತು ಹೇಳಿಕೆ ನೀಡಿದ ಅವರ ಆಪ್ತ ಸ್ನೇಹಿತ ಸಲಾಂ ಖಾಜಿ ಅವರು ಆರಂಭದಲ್ಲಿ ನಾವು ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಇರಬಹುದು ಎಂದು ಭಾವಿಸಿದ್ದೆವು ಆದರೆ ಇದ್ದಕಿದ್ದಂತೆ ಅವರ ದೇಹದ ತೂಕದಲ್ಲಿ ಬಾರಿ ಇಳಿಕೆಯಾಗಳು ಪ್ರಾಂಭವಾಯಿತು ಆ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ ಆದರೆ ಅಷ್ಟೋತ್ತಿಗಾಗಲೇ ಅದು ನಾಲ್ಕನೇ ಹಂತಕ್ಕೆ ತಲುಪಿದೆ ಎಂದು ವೈದ್ಯರು ಹೇಳಿದರು ಎಂದು ಹೇಳಿದ್ದಾರೆ.

Advertisement

ಮೆಹಮೂದ್ ಅವರ ಅರಿಜಿಯ ಹದಗೆಡುತ್ತಿರುವ ಸಂದರ್ಭದಲ್ಲಿ ಹಿರಿಯ ನಟರಾದ ಜೀತೇಂದ್ರ ಮತ್ತು ಬಾಲ್ಯದ ಸ್ನೇಹಿತ ಸಚಿನ್ ಪಿಲ್ಗಾಂವ್ಕರ್ ಅವರನ್ನು ಭೇಟಿ ಮಾಡವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಜೀತೆಂದ್ರ ಹಾಗೂ ಸಚಿನ್ ಪಿಲ್ಗಾಂವ್ಕರ್ ಅವರೂ ಬಂದು ಮೆಹಬೂಬ್ ಅವರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದರು.

ಜೂನಿಯರ್ ಮೆಹಮೂದ್ ಅವರ ನಿಜವಾದ ಹೆಸರು ನಯೀಮ್ ಸೈಯದ್. ಅವರು ನವೆಂಬರ್ 15, 1956 ರಂದು ಜನಿಸಿದರು. ಅವರು 1967 ರಲ್ಲಿ ಸಂಜೀವ್ ಕುಮಾರ್ ಅವರ ನೌನಿಹಾಲ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆಗ ಅವರಿಗೆ ಕೇವಲ 11 ವರ್ಷ. ಅದಾದ ಬಳಿಕ ತನ್ನ ವೃತ್ತಿಜೀವನದಲ್ಲಿ ಮೆಹಮೂದ್ ಅವರು ಸುಮಾರು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ‘ಕಟಿ ಪತಂಗ್’, ‘ಬ್ರಹ್ಮಚಾರಿ’, ‘ಮೇರಾ ನಾಮ್ ಜೋಕರ್’, ‘ಹಾಥಿ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಹೆಸರುವಾಸಿಯಾಗಿದ್ದರು.

ಇದನ್ನೂ ಓದಿ: Daily Horoscope: ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಅನುಭವಗಳಿಗೆ ಮನ್ನಣೆ

Advertisement

Udayavani is now on Telegram. Click here to join our channel and stay updated with the latest news.

Next