Advertisement
14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಜಗದೀಪ್ ಧನ್ಕರ್ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2017ರಿಂದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿಯಾಗಿ ಸೇವೆ ಸಲ್ಲಿಸಿದ ನಾಯ್ಡು ಅವರ ಐದು ವರ್ಷಗಳ ಕಿರು ಹಿನ್ನೋಟ ಇಲ್ಲಿದೆ.
Related Articles
Advertisement
ಬದಲಾವಣೆಯ ಕಾಲ:ನಾಯ್ಡು ಅವರ ಸೇವಾವಧಿಯನ್ನು ರಾಜ್ಯಸಭೆಯಲ್ಲಿ ಬದಲಾವಣೆಯ ಕಾಲ ಎಂದರೂ ತಪ್ಪಾಗದು. ಉಪರಾಷ್ಟ್ರಪತಿಯಾಗಿದ್ದ ಹಮೀದ್ ಅನ್ಸಾರಿ ಅವರು ಉಪ ರಾಷ್ಟ್ರಪತಿಯಾಗಿದ್ದಾಗ ಪ್ರಶ್ನೋತ್ತರ ವೇಳೆಯಲ್ಲಿ ಬದಲು ಮಾಡಿದ್ದರು. ನಾಯ್ಡು ಅವರು ಮಧ್ಯಾಹ್ನ 12 ಗಂಟೆಗೆ ಪ್ರಶ್ನೋತ್ತರ ಅವಧಿಯನ್ನು ಮರು ನಿಗದಿಪಡಿಸಿದರು. ಜೆಡಿಯುನ ರಾಜ್ಯಸಭಾ ಸದಸ್ಯರಾಗಿದ್ದ ಶರದ್ ಯಾದವ್ ಮತ್ತು ಅಲಿ ಅನ್ವರ್ ಅನ್ಸಾರಿ ಅವರನ್ನು ಅನರ್ಹಗೊಳಿಸಿದರು. ವಿಶೇಷವಾಗಿ ರಾಜ್ಯಸಭೆಯ ಸದಸ್ಯರಿಗೆ ಅಧಿವೇಶನದ ಸಂದರ್ಭದಲ್ಲಿ ಮಾತೃಭಾಷೆಯಲ್ಲಿ ಮಾತನಾಡುವುದಕ್ಕೆ ಮುಕ್ತ ಅವಕಾಶ ನೀಡಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷದ ಸದ್ಯಸರಾಗಿ ಅಪಾರ ಅನುಭವ ಹೊಂದಿರುವ ನಾಯ್ಡು ಅವರು, ಆ ಅನುಭವವನ್ನೇ ಆಧರಿಸಿ, ರಾಜ್ಯಸಭೆಯಲ್ಲಿ ವ್ಯವಸ್ಥಿತ ಸುಧಾರಣೆ ತರುವುದಕ್ಕೆ ಮತ್ತು ಅದರ ಕೆಲಸದ ಪಾರದರ್ಶಕತೆ, ಜವಾಬ್ದಾರಿ ಹೆಚ್ಚಿಸಲು ಸಚಿವಾಲಯಗಳ ಸಮಗ್ರ ಅಧ್ಯಯನಕ್ಕೆ ಆದೇಶಿಸಿದರು. ವಿದೇಶಿ ಪ್ರವಾಸ:
ಉಪ ರಾಷ್ಟ್ರಪತಿಯಾಗಿ ನಾಯ್ಡು ಅವರು ಅಮೆರಿಕ, ಪೆರು, ಬೆಲ್ಜಿಯಂ, ಫ್ರಾನ್ಸ್, ಜಿಂಬಾಂಬೆ, ವಿಯೆಟ್ನಾಂ ಸೇರಿ ಅನೇಕ ರಾಷ್ಟ್ರಗಳಿಗೆ ಪ್ರವಾಸ ಬೆಳೆಸಿದ್ದರು. ಹಾಗೆಯೇ ವಿದೇಶಗಳೊಂದಿಗೆ ಭಾರತ ಸ್ನೇಹ ಗಟ್ಟಿ ಮಾಡುವಲ್ಲಿ ಶ್ರಮಿಸಿದ್ದರು.