Advertisement

77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ : ಬೆಂಗಳೂರು ತರಕಾರಿ ವ್ಯಾಪಾರಿಗೆ 42,000 ಸಾವಿರ ದಂಡ.!

09:10 PM Oct 31, 2020 | Suhan S |

ಬೆಂಗಳೂರು : 77 ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ತರಕಾರಿ ವ್ಯಾಪಾರಿಗೆ ಬರೋಬ್ಬರಿ 42,000 ಸಾವಿರ ದಂಡ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Advertisement

ಪೊಲೀಸರು ಹೇಳುವ ಪ್ರಕಾರ ಮಡಿವಾಳದ ನಿವಾಸಿ ಅರುಣ್ ಕುಮಾರ್  ಇದುವರೆಗೆ 77  ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಅಂತೆ. ಶುಕ್ರವಾರ ಬೆಂಗಳೂರು ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಹಾಕದಿರುವ ಕಾರಣಕ್ಕಾಗಿ ಅರುಣ್ ಕುಮಾರ್ ಗಾಡಿಯನ್ನು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ದಂಡ ವಿಧಿಸಲು ಅಧಿಕಾರಿಗಳು ಹೋದಾಗ, ಅರುಣ್ ಕುಮಾರ್ ಹೆಸರಿನಲ್ಲಿ ಬಾಕಿ ಉಳಿದಿರುವ ದಂಡದ ಮೊತ್ತವನ್ನು ನೋಡಿ ಸ್ವತಃ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಅರುಣ್ ಕುಮಾರ್ ಇದುವರೆಗೆ 77 ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಉಲ್ಲಂಘಿಸಿದ್ದಕ್ಕಾಗಿ ಹೇರಿರುವ ದಂಡವನ್ನು ಕೋರ್ಟಿಗೆ ಕಟ್ಟಲು ಸಾಧ್ಯವಾಗಿಲ್ಲ.ಬಾಕಿರುವ ಮೊತ್ತವನ್ನು ಕಟ್ಟದೆ ಇರುವ ಕಾರಣಕ್ಕೆ ಮಡಿವಾಳ ಪೊಲೀಸರು ಅರುಣ್ ಕುಮಾರ್ ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ದಂಡದ ಮೊತ್ತ ಒಟ್ಟು 42 ಸಾವಿರವಾಗಿದ್ದು, ಅರುಣ್ ಕುಮಾರ್ ಬಳಿಯಿರುವ ಸೆಕೆಂಡ್ ಹ್ಯಾಂಡ್ ಬೈಕ್ ನ ಮೊತ್ತ 20 ಸಾವಿರ. ಟ್ರಾಫಿಕ್ ದಂಡದ ಮೊತ್ತವೇ ಸೆಕೆಂಡ್ ಹ್ಯಾಂಡ್ ಬೈಕ್ ಮೊತ್ತಕ್ಕಿಂತ ದುಪ್ಪಟ್ಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next