Advertisement

ಮುಂದಿನ ಚುನಾವಣೆಯಲ್ಲಿ ವಾಟಾಳ್‌ ಅಭ್ಯರ್ಥಿಗಳು ಕಣಕ್ಕೆ

11:41 AM Sep 27, 2017 | Team Udayavani |

ಬೆಂಗಳೂರು: 2018ರ ವಿಧಾನಸಭೆ ಚುನಾವಣೆಯಲ್ಲಿ ಕನ್ನಡ ಒಕ್ಕೂಟದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ. 

Advertisement

ಟೌನ್‌ಹಾಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಟಾಳ್‌ ಅವರಿಗೆ “ಬೂಟ್ಸ್‌ ಏಟು’ಕಾರ್ಯಕ್ರಮದಲ್ಲಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಕನ್ನಡ ನಾಡಿನ ಸಂಸ್ಕೃತಿ, ನೆಲ, ಜಲದ ರಕ್ಷಣೆಗೆ ಈಗಿನ ಪಕ್ಷಗಳಿಂದ ಸಾಧ್ಯವಿಲ್ಲ ಎಂದು ಮನವರಿಕೆಯಾಗಿದ್ದು, ಮುಂಬರುವ ಚುನಾವಣೆಯಲ್ಲಿ ನೂರು ಕ್ಷೇತ್ರಗಳಿಂದ ಕನ್ನಡ ಒಕ್ಕೂಟ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದು ತಿಳಿಸಿದರು.

ಯಾವುದೇ ರಾಜಕೀಯ ಪಕ್ಷಗಳು ಕನ್ನಡ ಪಕ್ಷಗಳಾಗಿ ಉಳಿದಿಲ್ಲ. ನಾಡು, ನುಡಿ, ಭಾಷೆ, ನೆಲ, ಜಲ, ಸಂಸ್ಕೃತಿಯ ಕುರಿತು ಕಾಳಜಿ ವ್ಯಕ್ತಪಡಿಸಿಲ್ಲ. ಮಹದಾಯಿ, ಕಾವೇರಿ ವಿಚಾರವಾಗಿ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟು ಕನ್ನಡ ಒಕ್ಕೂಟ ನಿರಂತರ ಹೋರಾಟ ನಡೆಸುತ್ತಿದ್ದರೂ, ಸರ್ಕಾರಗಳು, ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಹೋರಾಠ ಹತ್ತಿಕ್ಕುವ ಪ್ರಯತ್ನ ಮಾಡುತ್ತಿವೆ ಎಂದರು.

ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ಕಡ್ಡಾಯ ಮಾಡಬೇಕು ಎಂದು ಪರದೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದೆವು. ಈ ಸಂದರ್ಭದಲ್ಲಿ ಉಪ್ಪಾರಪೇಟೆ ಪೊಲೀಸರು ನನ್ನನ್ನು ಬಂಧಿಸಿ “ಬೂಟ್ಸ್‌’ನಿಂದ ಹೊಡೆದರು. ಅಂದಿನ ದಿನವನ್ನೇ ನನ್ನ ಹುಟ್ಟುಹಬ್ಬವೆಂದು ಇಲ್ಲಿಯವರೆಗೂ ಆಚರಿಸಿಕೊಂಡು ಬಂದಿದ್ದೇನೆ ಎಂದ ಅವರು, ಕನ್ನಡ ನಾಡು, ನುಡಿ ವಿಚಾರವಾಗಿ ಯಾವುದೇ ರಾಜೀಗೂ ಸಿದ್ಧವಿಲ್ಲ. ಕನ್ನಡಕ್ಕೆ ಧಕ್ಕೆಯಾದರೆ ಹಗಲಿರುಳು ಹೋರಾಟ ನಡೆಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ವಿಧಾನ ಪರಿಷತ್‌ ಸದಸ್ಯ ರಾಮಚಂದ್ರೇಗೌಡ, ಕನ್ನಡ ಸೇನೆಯ ಕೆ.ಆರ್‌.ಕುಮಾರ್‌, ಪ್ರವೀಣ್‌ಕುಮಾರ್‌ ಶೆಟ್ಟಿ, ಶಿವರಾಮೇಗೌಡ, ಗಿರೀಶ್‌ಗೌಡ, ಮಂಜುನಾಥ್‌ ದೇವ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Advertisement

ಮೆರವಣಿಗೆ: ಸಮಾರಂಭಕ್ಕೂ ಮುನ್ನ ವಾಟಾಳ್‌ನಾಗರಾಜ್‌ ಅವರನ್ನು ರಥದಲ್ಲಿ ಕೆ.ಆರ್‌.ಮಾರುಕಟ್ಟೆಯಿಂದ ಟೌನ್‌ಹಾಲ್‌ವರೆಗೆ ಜಾನಪದ ಕಲಾತಂಡಗಳ ಮೇಳದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next