Advertisement

Car Crash: ಕಾರು ರೇಸ್‌ ತರಬೇತಿ ವೇಳೆ ನಟ ಅಜಿತ್‌ ಕುಮಾರ್‌ ಕಾರು ಅಪಘಾತ!

11:26 PM Jan 07, 2025 | Team Udayavani |

ಹೊಸದಿಲ್ಲಿ: ಕಾರು ಮತ್ತು ಬೈಕ್‌ಗಳ ಪ್ರೇಮಿಯಾಗಿರುವ ಹಾಗೂ ರೇಸಿಂಗ್‌ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ತಮಿಳು ನಟ ಅಜಿತ್‌ ಕುಮಾರ್‌(53) ಅವರು, ರೇಸಿಂಗ್‌ ತರಬೇತಿಯ ವೇಳೆ ಕಾರು ಅಪಘಾತಕ್ಕೀಡಾಗಿದ್ದು, ಇದರ ಭೀಕರ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

Advertisement

ದುಬೈಯ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಮಂಗಳವಾರ ಕಾರು ರೇಸಿಂಗ್‌  ತರಬೇತಿ ನಡೆಸುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿದೇ ಅವರು ಪಾರಾಗಿದ್ದಾರೆ. ಮುಂಬರುವ ರೇಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದಕ್ಕಾಗಿ ಅವರು ದುಬೈನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಅವರ ಕಾರು ಪಕ್ಕದಲ್ಲಿದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಆದರೆ ನಟನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಿ: 
ನಟ ಅಜಿತ್‌ ಕುಮಾರ್‌ ಹಲವಾರು ವರ್ಷಗಳಿಂದ ಕಾರು ರೇಸಿಂಗ್‌ ಬಗ್ಗೆ ಆಸಕ್ತಿ ಹೊಂದಿದ್ದರು. ಇತ್ತೀಚೆಗೆ ಫಾರ್ಮುಲಾ ಬಿಎಂಡಬ್ಲ್ಯು ಏಷ್ಯಾ, ಬ್ರಿಟಿಷ್‌ ಫಾರ್ಮುಲಾ 3,  ಹಾಗೂ ಎಫ್‌ಐಎ ಎಫ್‌ 2 ಚಾಂಪಿಯನ್‌ಶಿಪ್‌ ಹಾಗೂ ಮೋಟಾರು ಸ್ಪೋರ್ಟ್‌ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅಜಿತ್‌ ಕುಮಾರ್‌ ತನ್ನದೇ ಆದ ರೇಸಿಂಗ್‌ ತಂಡವನ್ನು ಹೊಂದಿದ್ದು, ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. 2025ರಲ್ಲಿ ಕೂಡ ಯುರೋಪ್‌ನ ಪ್ರತಿಷ್ಠಿತ ರೇಸಿಂಗ್‌ ಸ್ಪರ್ಧೆಗಳಲ್ಲಿ ಈ ತಂಡ ಭಾಗಿಯಾಗಲು ಅಗತ್ಯ ಸಿದ್ಧತೆಗಳ ಕೈಗೊಂಡಿತ್ತು. ಅಜಿತ್‌ ಕುಮಾರ್‌ 90ರ ದಶಕದಲ್ಲೇ ರಾಷ್ಟ್ರೀಯ ಮೋಟಾರ್‌  ಸೈಕಲ್‌ ರೇಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮವಾಗಿ ಭಾಗವಹಿಸಿದ್ದರು.

Advertisement

ಈ ರೇಸಿಂಗ್‌ ಹವ್ಯಾಸದ ಪಯಣದಲ್ಲಿ ನಟ ಅಜಿತ್‌ ಕುಮಾರ್‌ ಈ ಮೊದಲು ಹಲವು ಬಾರಿ ಗಾಯಾಳು ಆಗಿ ಸಮಸ್ಯೆ ಅನುಭವಿಸಿ ರೇಸಿಂಗ್‌  ಸ್ಪರ್ಧೆಗಳಿಂದ ಸುಮಾರು 15 ವರ್ಷ ಕಾಲ ಹಿಂದೆ ಸರಿದಿದ್ದರು. ಇದೀಗ ಮತ್ತೆ ರೇಸಿಂಗ್‌ ಸ್ಪರ್ಧೆಗೆ ಮರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next