Advertisement

Desi Swara: ವಾಸವಿ ಕ್ಲಬ್‌ ಮೆರ್ಲಿಯನ್‌ ಸಿಂಗಾಪುರ- ವಾಸವಿ ಜಯಂತಿ ಪೂಜೆ ಸಂಪನ್ನ

01:12 PM May 29, 2024 | Team Udayavani |

ಸಿಂಗಾಪುರ:ವಾಸವಿ ಕ್ಲಬ್‌ ಮೆರ್ಲಿಯನ್‌ ಸಿಂಗಾಪುರ (ವಿಸಿಎಂಎಸ್‌) ವತಿಯಿಂದ ವಾಸವಿ ಜಯಂತಿ ಪೂಜೆಯನ್ನು ಮೇ 18, ರಂದು ಬಹಳ ಭವ್ಯವಾಗಿ ಆಯೋಜಿಸಲಾಯಿತು. ಸಿಂಗಾಪುರದಲ್ಲಿ ನೆಲೆಸಿರುವ ಸುಮಾರು 400 ಆರ್ಯ ವೈಶ್ಯರು ಸಿಂಗಾಪುರದ ಅತ್ಯಂತ ಹಳೆಯ ರಾಷ್ಟ್ರೀಯ ಪರಂಪರೆಯ ದೇವಾಲಯವಾದ ಚೈನಾಟೌನ್ನಲ್ಲಿರುವ ಶ್ರೀ ಮಾರಿಯಮ್ಮನ್‌ ದೇವಾಲಯದಲ್ಲಿ ಭಕ್ತಿಯಿಂದ ಭಾಗವಹಿಸಿದರು. ಹಾಡುಗಳು, ಭಾರತೀಯ ಶಾಸ್ತ್ರೀಯ ನೃತ್ಯಗಳು ಮತ್ತು ರಾಮಾಯಣ ನಾಟಕಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿತ್ತು.

Advertisement

ಕಾರ್ಯಕ್ರಮವನ್ನು ಸಿಂಗಾಪುರದ ತೆಲುಗು ಸಮಾಜದ ಮಾಜಿ ಅಧ್ಯಕ್ಷ ರಂಗ ರವಿಕುಮಾರ್‌ ಹಾಗೂ ಕನ್ನìತಿ ಶೇಷ ಮತ್ತು ವಿಸಿಎಂಎಸ್‌ ಪ್ರತಿನಿಧಿಗಳಾದ ಪಬ್ಬತಿ ಮುರಳಿ ಕೃಷ್ಣ , ಸುಮನ್‌ ರಾಯಲ ಮತ್ತು ಮುಕ್ಕ ಕಿಶೋರ್‌ ದೀಪವನ್ನು ಬೆಳಗಿಸಿ ಉದ್ಘಾಟಿಸಿದರು. ದೇವಾಲಯದ ದತ್ತಿ ಮಂಡಳಿಯ ಸದಸ್ಯ ಬೊಬ್ಟಾ ಶ್ರೀನಿವಾಸ ಅವರು ಮುಖ್ಯ ಅತಿಥಿಯಾಗಿದ್ದರು.

ವಿಶೇಷವಾಗಿ ವಾಸವಿ ಮಾತೆಯ ಜನ್ಮಸ್ಥಳವಾಗಿರುವ ಭಾರತದ ಪೆನುಗೊಂಡದಿಂದ ಕಳುಹಿಸಲಾದ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿಯ ವಿಗ್ರಹದ ಉಪಸ್ಥಿತಿ ಸಕಾರಾತ್ಮಕ ವಾತಾವರಣವನ್ನು ಹೆಚ್ಚಿಸಿತು.

ಕರ್ರಾ ಸಾಯಿ ಕೌಶಲ್‌ ಗುಪ್ತಾ ಅವರ ಗಣಪತಿ ಪ್ರಾರ್ಥನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾದವು. ಅನಂತರ ಮೌಲ್ಯಾ ಕಿಶೋರ್‌ ಶೆಟ್ಟಿ , ಮೇದಮ್‌ ಸಿದ್ದಿಶ್ರಿ ಮುಕ್ತಿಧಾ, ನಂಬೂರಿ ಉಮಾ ಮೋನಿಶಾ, ಚಿನ್ನಿ ಹಸ್ಮಿತಾ ಮತ್ತು ಚೈತನ್ಯ ನಂಬೂರಿ ಅವರ ಭರತನಾಟ್ಯ ಪ್ರದರ್ಶನ ನಡೆಯಿತು.

ತೋಟಂಸೆಟ್ಟಿ ನಂದ ಸಾಯಿ ಮತ್ತು ಕೊಂಜತಿ ವೆಂಕಟ ಇಶನ್‌ ಕೃಷ್ಣ ಅವರು ತಮ್ಮ ಕೊಳಲು ಮತ್ತು ಗಾಯನ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಕರ್ಲಪಟ್ಟಿ ಶಿಲ್ಪಾ, ನೇರಲಾ ನಿರಂಜನಾ ಮತ್ತು ನುಲು ಅರ್ಚಿತಾ ಸಾಯಿ ಕೀರ್ತನಾ ಅವರಿಂದ ನಾಮ ರಾಮಾಯಣದ ಪಠಣಗಳು ಪ್ರೇಕ್ಷಕರಲ್ಲಿ ಭಕ್ತಿಯನ್ನು ಹೆಚ್ಚಿಸಿದವು. ಕಿಶೋರ್‌ ಕುಮಾರ್‌ ಶೆಟ್ಟಿ ನಿರ್ದೇಶದ ಎರಡು ವಿಶಿಷ್ಟ ರಾಮಾಯಣ ನಾಟಕಗಳು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿವೆ. ಗಾಧಮ್‌ ಸೆಟ್ಟಿ ನಾಗ ಸಿಂಧು ನೇತೃತ್ವದಲ್ಲಿ 28 ಆರ್ಯ ವೈಶ್ಯ ಮಹಿಳೆಯರ ಕೋಲಾಟ ನೃತ್ಯವು ಪ್ರೇಕ್ಷಕರನ್ನು ರಂಜಿಸಿತು. ಫ‌ಣೇಶ್‌ ಆತೂ¾ರಿ, ವಾಸವಿ ಕನ್ಯಕಾ ಪರಮೇಶ್ವರಿ ಅತ್ತೂರಿ, ಕಾರ್ಯಕ್ರಮವನ್ನು ನಿರೂಪಿಸಿದರು.

Advertisement

ಸುಮಾರು 150 ಆರ್ಯ ವೈಶ್ಯ ಮಹಿಳೆಯರು ಕುಂಕುಮಾರ್ಚನೆ, ವಿಶೇಷ ಅಭಿಷೇಕ, ಆಲಂಕಾರಂ ಮತ್ತು ದೇವಾಲಯದಲ್ಲಿ ರಥಯಾತ್ರೆಯೊಂದಿಗೆ ಮಾತೆ ವಾಸವಿಗೆ ನಮನ ಸಲ್ಲಿಸಿದರು. 400 ಮಂದಿಗೆ ಅನ್ನ ಪ್ರಸಾದವನ್ನು ನೀಡಲಾಯಿತು.

ಈ ಕಾರ್ಯಕ್ರಮದ ಜತೆಗೆ ಹಿಂದಿನ ವರ್ಷಗಳಲ್ಲಿ ಮಹಾ ಶ್ರೀ ಮಾರಿಯಮ್ಮನ್‌ ದೇವಸ್ಥಾನದ ಕುಂಭ ಅಭಿಷೇಕ ಮತ್ತು ಹಿರಿಯ ಸದಸ್ಯರಾದ ಮುಕ್ಕಾ ಕಿಶೋರ್‌ ನಿರ್ವಹಿಸುತ್ತಿದ್ದ ಚಂಡಿಕಾಹೋಮ ಮುಂತಾದ ಗಮನಾರ್ಹ ಕೆಲಸಗಳು ಸೂಕ್ತ ಮನ್ನಣೆಯನ್ನು ಪಡೆದಿವೆ.

ವಿಸಿಎಂಎಸ್‌ ಅಧ್ಯಕ್ಷ ಪಬ್ಬತಿ ಮುರಳೀ ಕೃಷ್ಣ ಅವರು ಧನ್ಯವಾದಗಳನ್ನು ಅರ್ಪಿಸಿದರು. ದಿವ್ಯಾ ಗಾಜುಲಪಲ್ಲಿ ಸೋಮಿಸೆಟ್ಟಿ ಶ್ಯಾಮಲಾ, ಆತೂ¾ರಿ ಭರತ್‌, ಜ್ಞಾನವಿರಜನ್‌, ಜಯಕುಮಾರ್‌ ಪಂಚನಾಥನ್‌, ಮಾರ್ತಾಂಡ ಕಟಕಂ ಶಿವಕಿಶನ್‌, ಸ್ವಾತಿ, ರಾಘವ್‌ ಅಲಪತಿ, ರಾಜನ್‌, ಕೊಂಚತಿ ವಿಷ್ಣುಪ್ರಿಯಾ, ವಿಷಿ ಕೂನ್‌, ಅವಿನಾಶ್‌ ಅವರ ಬೆಂಬಲಕ್ಕಾಗಿ ವಿಸಿಎಂಎಸ್‌ ಕಾರ್ಯದರ್ಶಿ ಸುಮನ್‌ ರಾಯಲ ಅವರು ಸೇವಾಧಲ್‌ ಸದಸ್ಯರಿಗೆ , ಕೋಟಾ, ಅನಿಲ್‌ ಕುಮಾರ್‌, ಸಾಧು, ದತ್ತಾ ಕೊತಮಾಸು, ಸಂತೋಷ್‌ ಮಾಧರ್ಪು, ಲಕ್ಷ್ಮಣ್‌ ರಾಜು, ಮುಕ್ಕಾ ಸತೀಶ್‌, ಕಾರ್ತಿಕ್‌ ಮಾಣಿಕಂತ ಮತ್ತು ಸುರೇಶ್‌ ದಿನ್ನೆಪಲ್ಲಿ ಅವರ ಕೊಡುಗೆಗಳಿಗಾಗಿ ಕೃತಜ್ಞತೆ ಸಲ್ಲಿಸಲಾಯಿತು.

ವಿಸಿಎಂಎಸ್‌ ವಿಶಿಷ್ಟವಾದ ಮತ್ತು ಹೆಚ್ಚಿನ ಆಕರ್ಷಣೆ ಕಾರ್ಯಕ್ರಮಗಳನ್ನು ರಚಿಸಲು ಹೆಸರುವಾಸಿಯಾಗಿದೆ. ಸಮಿತಿಯ ವಿನಯ್‌ ಬಟೂ°ರು, ಮಾಕೇಶ್‌ ಭೂಪತಿ, ಕಿಶೋರ್‌ ಕುಮಾರ್‌ ಶೆಟ್ಟಿ , ಫ‌ಣೀಶ್‌ ಆತೂರಿ, ಆನಂದ್‌ ಗಾಂಧೆ, ರಾಜಾ ವಿಶ್ವನಾಥಲು ಮತ್ತು ಸರಿತಾ ವಿಶ್ವನಾಥ್‌ ಅವರನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next