Advertisement
ರವಿವಾರ ದಾವಣಗೆರೆಯಲ್ಲಿ ನಡೆದ ಜಿಲ್ಲಾ ಮಟ್ಟದ 537ನೇ ಕನಕದಾಸ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಜಾತಿ ಗಣಪತಿ ವರದಿ ಜಾರಿಗೆ ಬಹಳ ದಿನಗಳಿಂದ ಒತ್ತಡ ಇದ್ದು ನಾನು ಜಾತಿ ಜನಗಣತಿ ಪರವಾಗಿ ಇರುತ್ತೇನೆ. ಜಾತಿಗಳ ಜನಸಂಖ್ಯೆ ಆಧಾರದಲ್ಲಿ ಯಾವುದೇ ಕಾರ್ಯಕ್ರಮ, ಯೋಜನೆ ರೂಪಿಸಲು ಅನುಕೂಲ ಆಗಲಿದೆ ಎಂದರು.
ಒಳಮೀಸಲಾತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ್ದು ಪ್ರಾಯೋಗಿಕ ಮಾಹಿತಿ ಇಲ್ಲದೇ ಇರುವುದರಿಂದ ನಾಗಮೋಹನ ದಾಸ್ ನೇತೃತ್ವದ ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ನೀಡಲು ನಮ್ಮ ಸರಕಾರ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಎಲ್ಲರನ್ನೂ ಪ್ರೀತಿಸುತ್ತೇನೆ
ಯಾವ ಧರ್ಮದಲ್ಲೂ ಮನುಷ್ಯ ತಾರತಮ್ಯ, ದ್ವೇಷ ಎನ್ನುವುದೇ ಇಲ್ಲ. ಧರ್ಮವನ್ನು ರಾಜಕೀಯವಾಗಿ ಬಳಸಿಕೊಳ್ಳುವವರು ತಮ್ಮ ಲಾಭಕ್ಕಾಗಿ ತಾರತಮ್ಯ, ದ್ವೇಷ ಸೃಷ್ಟಿಸುತ್ತಾರೆ. ನಾನು ಯಾವುದೇ ಜಾತಿ, ಧರ್ಮವನ್ನು ದ್ವೇಷಿಸುವುದೇ ಇಲ್ಲ. ಎಲ್ಲರನ್ನೂ ಪ್ರೀತಿಸುತ್ತೇನೆ. ಆದರೆ ಯಾರು ಜಾತಿಯ ಆಧಾರದಲ್ಲಿ ದ್ವೇಷ ಮಾಡುತ್ತಾರೋ ಅಂತಹವರನ್ನು ನಾನು ಎಂದೆಂದಿಗೂ ದ್ವೇಷಿಸಲು ಹೋಗುವುದಿಲ್ಲ. ಆದರೆ ವಿರೋಧ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿದರು.