Advertisement

ವಸಾಯಿರೋಡ್‌ ಜಿಎಸ್‌ಬಿ ಬಾಲಾಜಿ ಮಂದಿರ:ಶ್ರೀ ಸತ್ಯಮಾರುತಿ ವ್ರತ

04:21 PM Aug 29, 2017 | Team Udayavani |

ಮುಂಬಯಿ: ವಸಾಯಿ ರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಬಾಲಾಜಿ ಸೇವಾ ಸಮಿತಿಯ ಬಾಲಾಜಿ ಮಂದಿರದಲ್ಲಿ  ಶ್ರೀ ಸತ್ಯಮಾರುತಿ ವ್ರತವನ್ನು  ಸಮಾಜದ ಎಲ್ಲ ಮಕ್ಕಳ ಒಳಿತಿಗಾಗಿ ಆಚರಿಸಲಾಯಿತು.

Advertisement

ವಡಾಲಾ ಶ್ರೀ ರಾಮ ಮಂದಿರದ  ವೇದಮೂರ್ತಿ ಅನಂತ ಸುಧಾಮ ಭಟ್‌ ಮಾರ್ಗದರ್ಶನ ಹಾಗೂ ಸಮಿತಿಯ ವೇ|ಮೂ| ಗಿರಿಧರ್‌ ಭಟ್‌  ಉಪಸ್ಥಿತಿಯಲ್ಲಿ  ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಸಮಿತಿಯ ಉಪಾಧ್ಯಕ್ಷ ಕಟಪಾಡಿ ಗಣೇಶ್‌ ಕಾಮತ್‌ ಮತ್ತು ಗೀತಾ ಕಾಮತ್‌ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಸಮಿತಿಯ ಯುವ ವಿಭಾಗದ ವತಿಯಿಂದ ಭಜನಾ ಕಾರ್ಯಕ್ರಮ ಸುಶ್ರಾವ್ಯವಾಗಿ ಜರಗಿತು. ಅವರು ಕನ್ನಡ, ಕೊಂಕಣಿ, ಮರಾಠಿ ಮತ್ತು ಹಿಂದಿ ಭಜನೆಗಳನ್ನು ಹಾಡಿ ನೆರೆದಿದ್ದ ನೂರಾರು ಸಭಿಕರ ಮನ ಸೆಳೆದರು. ಹಾರ್ಮೋನಿಯಂನಲ್ಲಿ ಪ್ರಕಾಶ್‌ ಪ್ರಭು, ವಿನಾಯಕ ಪ್ರಭು, ತಬಲಾದಲ್ಲಿ ರಾಜೇಶ್‌ ಪೈ, ಅಮೇಯ ಪೈ, ಪಖ್ವಾಜ್‌ನಲ್ಲಿ ಪ್ರಸಾದ್‌ ಪ್ರಭು ಮತ್ತು ಗಣೇಶ್‌ ಪ್ರಭು ಸಹಕರಿಸಿದರು.

ತದನಂತರ ಶ್ರೀ ಸತ್ಯಮಾರುತಿ ದೇವರಿಗೆ ಹಾಗೂ ಆರಾಧ್ಯ ದೇವರಾದ ವೆಂಕಟರಮಣ ಮತ್ತು ಇತರ ಪರಿವಾರ ದೇವರಿಗೆ ಆರತಿ ಬೆಳಗಿಸಲಾಯಿತು. ಬೆಳ್ಳಿಯ ವೀರ ಮಾರುತಿ ಮೂರ್ತಿ ಅನಂತ್‌ ಭಟ್‌ ಅವರ ಹಸ್ತದಿಂದ ಪೂಜಿಸಿ ಸಮಿತಿಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸ ಲಾಯಿತು. ಈ ಮೂರ್ತಿ ಯನ್ನು ಅನಂತ್‌ ಭಟ್‌ ಪರಿವಾರದಿಂದ ಪ್ರಾಯೋಜಿಸಲಾಯಿತು. 

ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯನ್ನು ಸಮಿತಿಯ ಉಪ ಕೋಶಾಧಿಕಾರಿ ಗಣೇಶ್‌ ಲಕ್ಷ್ಮಣ್‌ ಪೈ ಪರಿವಾರದಿಂದ ಆಯೋಜಿಸಲಾಯಿತು.

Advertisement

ಏತನ್ಮಧ್ಯೆ, ಕಾರ್ಯಕ್ರಮಕ್ಕೆ  ಪರಿವಾರ ಸಮೇತ ಭೇಟಿ ನೀಡಿದ ವಸಾಯಿ ವಲಯದ ಪಾಲ^ರ್‌ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರಾಜ್‌ ತಿಲಕ್‌ ರೌಶನ್‌ ಅವರನ್ನು  ಸಮಿತಿಯ ವತಿಯಿಂದ  ಅಧ್ಯಕ್ಷ ತಾರನಾಥ ಪೈ, ಸಂಚಾಲಕ ದೇವೇಂದ್ರ ಭಕ್‌¤ ಮತ್ತು ಕಾರ್ಯ ದರ್ಶಿ ಪುರುಷೋತ್ತಮ ಶೆಣೈ ಅವರು ಶಾಲು ಹೊದಿಸಿ, ಫಲ ಪುಷ್ಪ ಮತ್ತು ಬಾಲಾಜಿ ವಿಗ್ರಹ ನೀಡಿ ಸಮ್ಮಾನಿಸಿದರು. ಉದ್ಯಮಿ ನಿಟ್ಟೆ ವಿಜಯಾನಂದ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

ಈ ವಿಶೇಷ ಪೂಜೆಗೆ ಸತ್ಯಮಾರುತಿ ಮತ್ತು ಬಾಲಾಜಿ ಮಂಟಪವನ್ನು ಅಲಂಕರಿಸಲು ವೀಣಾ ಜಿ. ಪೈ ಮತ್ತು ಮಕ್ಕಳು ಕುರ್ಲಾ ಇವರ ವತಿಯಿಂದ ಹೂವಿನ ಸೇವೆಯನ್ನು ಪ್ರಾಯೋಜಿಸಲಾಯಿತು.

ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರ ಉಸ್ತು ವಾರಿಯಲ್ಲಿ  ಧಾರ್ಮಿಕ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು. ವೇ|ಮೂ| ಅನಂತ್‌ ಭಟ್‌, ವಿನಾಯಕ ಎಚ್‌. ಪೈ, ವಿಜಯೇಂದ್ರ ಪ್ರಭು ಮತ್ತು ಶ್ರೀಪತಿ ಭಟ್‌ ನೇತೃತ್ವದಲ್ಲಿ ಅಲಂಕರಿಸಿದ ಸತ್ಯಮಾರುತಿ ಮತ್ತು ಬಾಲಾಜಿ ಮಂಟಪವು  ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.  ಮುಂಬಯಿ, ವಸಾಯಿ ಪರಿ ಸರದ ಸಮಾಜದ‌ವರು  ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next