ಬೆಂಗಳೂರು: ಜನಪ್ರಿಯ ಧಾರಾವಾಹಿಗಳು ಮತ್ತು ನಾನ್ ಫಿಕ್ಷನ್ ಶೋ ಗಳಿಂದ ಹೆಸರಾಗಿರುವ ಜೀ಼ ಕನ್ನಡ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ.
ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೌಟುಂಬಿಕ ಮನರಂಜನಾ ಶೋ ʼಜೀ಼ ಎಂಟರ್ಟೈನರ್ಸ್ ‘ ಜೀ಼ ಕನ್ನಡ ವಾಹಿನಿಯಲ್ಲಿ ಬರಲಿದೆ.
ಇದರ ವಿಶೇಷತೆ ಎಂದರೆ ಪ್ರಸಿದ್ದ ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೇ, ಇದರಲ್ಲಿ ‘ಸ್ಮಾರ್ಟರ್, ಸ್ಟ್ರಾಂಗರ್, ಫಾಸ್ಟರ್, ಫ್ಯಾಮಿಲಿಯರ್, ಲಕ್ಕಿಯರ್’ ಎಂಬ 5 ಸುತ್ತುಗಳಿದ್ದು ಇಷ್ಟು ದಿನ ಎಂದು ಕಾಣದ, ಆಡದ ಟಾಸ್ಕ್ ಗಳನ್ನು ಜೀ಼ ತಾರೆಯರು ಆಡಲಿದ್ದು ವೀಕ್ಷಕರಿಗೆ ಮನಪೂರ ಮನರಂಜನೆ ನೀಡಲಿದ್ದಾರೆ. ಈ ಶೋನಲ್ಲಿ ಧಾರಾವಾಹಿಯ ಒಟ್ಟು ಹತ್ತು ಕುಟುಂಬಗಳು ಪಾಲ್ಗೊಳ್ಳಲಿವೆ.
ತನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರೂಪಕ ಅಕುಲ್ ಬಾಲಾಜಿ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಷ್ಟೇ ಅಲ್ಲದೇ ಪ್ರತಿ ಸಂಚಿಕೆಯಲ್ಲೂ ತಾರೆಯರ 50 ಅಭಿಮಾನಿಗಳು ಆಟದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಅಲ್ಲದೆ ಮೊದಲನೇ ಮತ್ತು ಎರಡನೇ ಸಂಚಿಕೆಗಳನ್ನು ವೀಕ್ಷಿಸಿ, ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರೆ ಆಕರ್ಷಕ ಬಹುಮಾನವೂ ಇರಲಿದೆ.