Advertisement
ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಪದಾಧಿಕಾರಿಗಳ ಸಭೆಯಲ್ಲಿ ವಾರಾಹಿ ನೀರಾವರಿ ಯೋಜನೆಯ ಕುರಿತಂತೆ ಉಡುಪಿ ಶಾಸಕರ ಬಳಿ ರೈತ ಸಂಘದ ನಿಯೋಗ ತೆರಳಿ, ಹಳೆ ಯೋಜನೆ ಕೈಬಿಟ್ಟು, ಸ್ಥಳೀಯರಿಗೆ ಅನ್ಯಾಯವಾಗದಂತೆ ಹೊಸ ಯೋಜನೆ ರೂಪಿಸುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ, ಟೆಂಡರ್ ಕರಾರು ಪ್ರಕಾರ ವಾರಾಹಿ ನೀರನ್ನು ಶಂಕರನಾರಾಯಣ, ಹಾಲಾಡಿ, ಆವರ್ಸೆ, ಬಿಲ್ಲಾಡಿ, ಹೆಗ್ಗುಂಜೆ, ಚೇರ್ಕಾಡಿ ಮೂಲಕ ಹಾದುಹೋಗುವ ಪೈಪ್‌ಲೈನ್ ಮೂಲಕ ಸ್ವರ್ಣ ನದಿಯ ಬಜೆ ಡ್ಯಾಂಗೆ ಹರಿಸಲಾಗುತ್ತದೆ. ಆದರೆ ಈ ಗ್ರಾಮಗಳಿಗೆ ಕಚ್ಚಾ ನೀರನ್ನು ಕೊಟ್ಟು, ಉಡುಪಿಗೆ ಮಾತ್ರ ಶುದ್ಧ ನೀರು ಕೊಡುವುದು ಎಂದು ಟೆಂಡರ್ ಮಾರ್ಗಸೂಚಿಯಲ್ಲಿದೆ. ಇದು ಸಾಮಾಜಿಕ ನ್ಯಾಯವಲ್ಲ. ಈ ಕುರಿತಂತೆ ಈಗಾಗಲೇ ರೈತ ಸಂಘ ಹೈಕೋರ್ಟ್ ಮೊರೆಹೊಕ್ಕಿದೆ. ಈಗಾಗಲೇ 2 ಹಂತದ ವಿಚಾರಣೆ ಕೂಡ ಮುಗಿದಿದೆ. ಅಗತ್ಯಬಿದ್ದರೆ ಉಡುಪಿಯ ಶಾಸಕರಲ್ಲಿಯೂ ಈ ಕುರಿತು ಮಾತನಾಡಲಾಗುವುದು ಎಂದವರು ಹೇಳಿದರು. ರೈತ ಸಂಘದ ಆಗ್ರಹವೇನು?
ವಾರಾಹಿ ನೀರನ್ನು ಉಡುಪಿಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಬರುವ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಕೊಡಬೇಕು. ಅದಲ್ಲದೆ ಪೈಪ್‌ಲೈನ್ ಹಾದುಹೋಗಲು ರಸ್ತೆಯ ಬದಲು ಬೇರೆ ಜಾಗವನ್ನು ಗುರುತಿಸಲಿ. ನೇರವಾಗಿ ಬಜೆ ಡ್ಯಾಂಗೆ ನೀರು ಕೊಂಡೊಯ್ಯುವ ಬದಲು ವಾರಾಹಿ ಭಾಗದಲ್ಲಿಯೇ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ, ಇಲ್ಲಿಂದ ಹತ್ತಿರದ ದಾರಿಯಾದ ಶಿರಿಯಾರ ಮೂಲಕ ನೀರು ಕೊಂಡುಹೋಗಲಿ ಎನ್ನುವ ಆಗ್ರಹ ಸಭೆಯಲ್ಲಿ ಕೇಳಿ ಬಂತು.
ಸಭೆಯಲ್ಲಿ ಸಂಘದ ಪ್ರ. ಕಾರ್ಯದರ್ಶಿ ಸತೀಶ್ ಕಿಣಿ, ಪದಾಧಿಕಾರಿಗಳಾದ ಪ್ರಕಾಶ್ಚಂದ್ರ ಶೆಟ್ಟಿ, ಅಶೋಕ್ ಶೆಟ್ಟಿ, ವಿಕಾಸ್ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
Related Articles
ಪ್ರಾಕೃತಿಕ ವಿಕೋಪದಿಂದ ಬೆಳೆಹಾನಿಯನ್ನು ಅನು ಭವಿಸಿದ ರೈತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಧನ ಒದಗಿಸಬೇಕು.
ಸಾಲ ಮನ್ನಾ ಕುರಿತು
ಕೃಷಿ ಇಲಾಖೆಯ ಸವಲತ್ತುಗಳು ಸಮರ್ಪ ಕ ವಿತರಣೆ ಹಾಗೂ ರೈತರ ಮೊಬೈಲ್‌ಗೆ ಸವಲತ್ತು ಗಳ ಮಾಹಿತಿಗಳು ಸಿಗುವಂ ತಾಗಲಿ.
ಮರಳುಗಾರಿಕೆ, ಮಕ್ಕಳ ಬಸ್ ಪಾಸ್.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ
ಗ್ರಾಮೀಣ ಬಸ್ ಸಂಚಾರ ಸ್ಥಗಿತಗೊಳಿಸಿದ ಕುರಿತು
ಕೃಷಿ ಯಂತ್ರೋಪಕರಣ ಗಳನ್ನು ಸಹಕಾರ ಸಂಘಗಳಿಂದ ಖರೀದಿಸುವ ಕುರಿತು ಚರ್ಚೆ ನಡೆಯಿತು.
Advertisement