Advertisement
ನೀರು ಪೋಲುಪ್ರಸ್ತುತ ವಾರಾಹಿ ಎಡದಂಡೆ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಕಾಲುವೆ ಹಾದು ಹೋದ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಸದ್ಬಳಕೆಯಾಗದೆ ನೂರಾರು ಕ್ಯೂಸೆಕ್ ನೀರು ಪೋಲಾಗುತ್ತಿದೆ . ಪ್ರಮುಖ ಕಾಲುವೆಗೆ ಉಪ ನಾಲೆ ನಿರ್ಮಿಸುವ ನಿಟ್ಟಿನಿಂದ ತಲ್ಲಕ್ಕಿ ಸಮೀಪ ಇಲಾಖೆ ಗೇಟ್ ನಿರ್ಮಿಸಿದೆ. ಆದರೆ ಗೇಟ್‌ನಿಂದ ಸುಮಾರು 500 ಮೀಟರ್ ಅಂತರದಲ್ಲಿರುವ ಹುಂತನ ಕೆರೆಗೆ ನೀರು ಹಾಯಿಸುವುದಕ್ಕೆ ಕ್ರಮ ಕೈಗೊಂಡಿಲ್ಲ.
ಹುಂತನ ಕೆರೆಗೆ ನೀರು ಹಾಯಿಸುವ ಬಗ್ಗೆ ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಗೆ ಅನುಗುಣವಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು, ಪ್ರಾಣಿ, ಪಕ್ಷಿಗಳು ಸೇರಿದಂತೆ ನೂರಾರು ಎಕರೆ ಕೃಷಿ ಭೂಮಿಗಳಿಗೆ ಪ್ರಯೋಜನವಾಗಲಿದೆ. ಅತ್ಯಮೂಲ್ಯ ಕೆರೆಗಳ ಪುನಶ್ಚೇತನಗೊಳ್ಳುವ ಮೂಲಕ ಕೃಷಿ ಭೂಮಿಗಳು ಮತ್ತೆ ಹಸನಾಗಬೇಕಾಗಿರುವುದು ಅಗತ್ಯವಾಗಿದೆ ಎನ್ನುತ್ತಾರೆ ಇಲ್ಲಿನ ಹಿರಿಯ ಕೃಷಿಕ ಸಾಧು ಪೂಜಾರಿ ಅವರು. ಒತ್ತುವರಿ
ನಿರ್ವಹಣೆಯ ಕೊರತೆಯಿಂದಾಗಿ ಸೊರಗಿ ಹೋಗಿರುವ ಈ ಕೆರೆ ಸುತ್ತ ಗಿಡಗಂಟಿಗಳು ಆವರಿಸಿವೆ. ಅಪಾರ ನೀರಿನಾಶ್ರಯ ಹೊಂದಿದ ಕೆರೆಯ ಪ್ರದೇಶವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡ ಬಗ್ಗೆ ಆರೋಪಗಳಿವೆ.
Related Articles
ಉಪ ನಾಲೆಗಳ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧಗೊಂಡಿದ್ದು , ಉಪನಾಲೆಯಿಂದ ನೇರವಾಗಿ (ಈಜಿrಛಿcಠಿ Ouಠಿlಛಿಠಿ) ಕೆರೆಗೆ ನೀರು ಹಾಯಿಸುವ ಪ್ರಕ್ರಿಯೆ ನಡೆಯಲಿದ್ದು, ಈ ಕುರಿತು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಮಳೆಗಾಲದ ಅನಂತರ ಕಾಮಗಾರಿ ಆರಂಭಗೊಳ್ಳಲಿದೆ.
– ಪ್ರಸನ್ನ ಶೇಟ್, ಅಭಿಯಂತ, ವಾರಾಹಿ ಯೋಜನಾ ವಿಭಾಗ.
Advertisement
ಉತ್ತಮ ನೀರಿನಾಶ್ರಯಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 10 ಎಕರೆ ವಿಸ್ತೀರ್ಣದ ಹುಂತನ ಕೆರೆಯಲ್ಲಿ ಉತ್ತಮ ನೀರಿನಾಶ್ರಯವನ್ನು ಹೊಂದಿದೆ. ಇದನ್ನು ಪುನರುಜ್ಜೀವನಗೊಳಿಸುವುದರೊಂದಿಗೆ ವಾರಾಹಿ ಕಾಲುವೆ ಯಿಂದ ಉಪ ನಾಲೆಯ ಮೂಲಕ ಹುಂತನ ಕೆರೆಗೆ ನೀರು ಹಾಯಿಸಿದಾಗ ಗ್ರಾಮದಲ್ಲಿ ಎದುರಾಗುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. – ದಿನೇಶ್ ಹೆಗ್ಡೆ ಮೊಳಹಳ್ಳಿ, ಸದಸ್ಯರು, ಗ್ರಾ.ಪಂ. ಮೊಳಹಳ್ಳಿ.