Advertisement
ಆಂತರಿಕ ದೃಷ್ಟಿಯಲ್ಲಿ ಬೇರೆ. “ನಾನು ಕರ್ತವ್ಯ ಮಾಡುತ್ತಿದ್ದೇನೆ. ದೇವರು ನನಗೆ ಎಲ್ಲ ಶಕ್ತಿ ಕೊಟ್ಟಿದ್ದಾನೆ’ ಎಂದು ತಿಳಿದು ಕೆಲಸ ಮಾಡಬೇಕು. ನಾವು ಹುಟ್ಟುವಾಗ ಏನನ್ನಾದರೂ ತಂದಿದ್ದೇವೆಯೋ? ಹುಟ್ಟಿದ ಬಳಿಕವಾದರೂ ನಿಯಂತ್ರಣ ಇದೆಯೆ? ಅದಕ್ಕಾಗಿಯೇ ಮಧ್ವಾಚಾರ್ಯರು “ಹರಿರೇವ ಪರಃ…’ ಎಂಬ ಸಂದೇಶವನ್ನು ಕೊಟ್ಟದ್ದು. ಹೋಗಲಿ ನಾವು ನಮ್ಮದು ಎಂದು ತಿಳಿದುಕೊಳ್ಳಿ. ಮುಂದಾದರೂ ನಾವು ಹೇಳಿದಂತೆ ಕೇಳುತ್ತದೆಯೆ? ತಲೆ ಬೋಳಾಗುವುದು, ವೃದ್ಧಾಪ್ಯ ಯಾರಿಗೂ ಇಷ್ಟವಿಲ್ಲ, ಆದರೂ ಬೋಳಾಗುವುದನ್ನು, ವೃದ್ಧಾಪ್ಯ ಬರುವುದನ್ನು ನಿಲ್ಲಿಸಲು ಆಗುತ್ತದೋ? ಆಗಿಯೇ ಆಗುತ್ತದೆ. “ನೀನು’, “ನಿನ್ನದು’ ಅಂತಾದರೆ ನಿಯಂತ್ರಣ ಬೇಕಿತ್ತಲ್ಲ?
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811