Advertisement
ಮಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಹೊರಟ ರೈಲು ಸುಮಾರು 3.40 ಗಂಟೆ ಪ್ರಯಾಣಿಸಿ ಮಧ್ಯಾಹ್ನ 12.10ರ ಸುಮಾರಿಗೆ ಮಡಗಾಂವ್ ತಲುಪಿದೆ. 12.55ಕ್ಕೆ ಮಡಗಾಂವ್‌ನಿಂದ ರೈಲು ಹೊರಟಿದ್ದು 4.35ಕ್ಕೆ ಮಂಗಳೂರು ಸೆಂಟ್ರಲ್ ತಲುಪಿತು. ಮಧ್ಯೆ ಕಾರವಾರ ಮತ್ತು ಉಡುಪಿಯಲ್ಲಿ ನಿಲುಗಡೆ ನೀಡಲಾಗಿದೆ.
ಮಂಗಳೂರಿನಿಂದ ಬೆಳಗ್ಗೆ ಹೊರಡುವ ವೇಳೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಮತ್ತಿತರರು ಆಗಮಿಸಿ, ರೈಲನ್ನು ವೀಕ್ಷಿಸಿದರು.
Related Articles
Advertisement
ಮಂಗಳೂರು ಸೆಂಟ್ರಲ್‌ನ ನೂತನ ಪ್ಲಾಟ್‌ಫಾರಂ 4 ಮತ್ತು 5ರ ಕಾಮಗಾರಿ ಪೂರ್ಣಗೊಂಡಿದ್ದು ಮುಂಬರುವ ಜ. 15ರಂದು ಉದ್ಘಾಟನೆಗೊಳ್ಳಲಿದೆ ಎಂದೂ ನಳಿನ್ ತಿಳಿಸಿದರು.
ಮಂಗಳೂರಿನಲ್ಲಿ ತಂಗಲಿದೆ ವಂದೇ ಭಾರತ್ಡಿ. 30ರಂದು ಇತರ ಐದು ವಂದೇಭಾರತ್ ರೈಲುಗಳ ಜತೆ ಮಂಗಳೂರು-ಮಡಗಾಂವ್ ವಂದೇಭಾರತ್ ರೈಲಿಗೆ ಚಾಲನೆ ಸಿಗಲಿದೆ. ಬಳಿಕ ರೈಲು ಪ್ರತೀ ರಾತ್ರಿ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಸುಧಾರಣೆಗೊಂಡಿರುವ ಪಿಟ್‌ಲೈನಿನಲ್ಲಿ ತಂಗಲಿದೆ. ರೈಲಿನ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಸೆಂಟ್ರಲ್‌ನಿಂದ ಬೆಳಗ್ಗೆ 8.30ಕ್ಕೆ ಹೊರಟು ಮಧ್ಯಾಹ್ನ 1.05ಕ್ಕೆ ಮಡಗಾಂವ್ ತಲಪುವುದು. ಮಡಗಾಂವ್‌ನಿಂದ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್ ತಲುಪುವುದು. ಡಿ. 30ರಂದು ರೈಲಿಗೆ ಚಾಲನೆ ನೀಡಿದ ಬಳಿಕವಷ್ಟೇ ಅಂತಿಮ ವೇಳಾಪಟ್ಟಿ ಬರಬಹುದು. ರೈಲಿನ ನಂಬರ್ ನೀಡುವುದು, ಬುಕ್ಕಿಂಗ್‌ಗೆ ತೆರೆಯುವುದು ಇತ್ಯಾದಿ ಮುಂದೆ ನಡೆಯಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.