Advertisement
“ಆದರ್ಶದ ಪಥದಿ ಮುನ್ನಡೆಯೋ ಧ್ಯೇಯವಾದಿ’ ಎನ್ನುವ ಘೋಷವಾಕ್ಯದಡಿ ಜರಗಿದ ಬೌದ್ಧಿಕ ವರ್ಗದಲ್ಲಿ ಅವರು ಒಂದು ತಾಸು ಕಾಲ ಉಪನ್ಯಾಸ ನೀಡಿ, ಸಂಘ ಸ್ಥಾಪನೆಯ ಹಿನ್ನೆಲೆ ಹಾಗೂ ಕಾರ್ಯಕರ್ತರು, ರಾಷ್ಟ್ರೀಯವಾದಿಗಳು ಬೆಳೆಸಿಕೊಳ್ಳಬೇಕಾದ ಆತ್ಮವಿಶ್ವಾಸದ ಬಗ್ಗೆ ಮಾತನಾಡಿದರು.
ಸಂಘನಿಕೇತನದ ಬಳಿ ನಿರ್ಮಿಸಲಾದ ಸಂಘದ ನೂತನ ಕಾರ್ಯಾಲಯಕ್ಕೆ ಡಾ| ಭಾಗವತ್ ಭೇಟಿ ನೀಡಿದರು. ಈ ಸಂದರ್ಭ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಕಾರ್ಯಾಲಯದ ಆವರಣದಲ್ಲಿ ಸ್ವರ್ಣಚಂಪಕ ಗಿಡವೊಂದನ್ನು ನೆಟ್ಟರು. ತುಳುನಾಡಿನ ಸಾಂಪ್ರದಾಯಿಕ ಶೈಲಿಯ ಮನೆಯನ್ನು ಹೋಲುವಂತೆ ನಿರ್ಮಿಸಲಾದ ನೂತನ ಕಾರ್ಯಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Related Articles
Advertisement
ಪ್ರಭಾತ ಶಾಖೆಗೆ ಭೇಟಿಡಾ| ಭಾಗವತ್ ಅವರು ಮಂಗಳೂರಿನ ಬೊಲ್ಪುಗುಡ್ಡೆಯಲ್ಲಿ ರವಿವಾರ ಬೆಳಗ್ಗೆ ನಡೆದ ಆರೆಸ್ಸೆಸ್ ಪ್ರಭಾತ ಶಾಖೆಗೆ ಭೇಟಿ ನೀಡಿದರು. ಬಳಿಕ ಸಂಘನಿಕೇತನಕ್ಕೆ ಮರಳಿ ಇಡೀ ದಿನ ಸಂಘಟನೆಯ ಹಲವು ಸ್ತರದ ಮುಖಂಡರು, ಕಾರ್ಯಕರ್ತರೊಂದಿಗೆ ಬೈಠಕ್ ನಡೆಸಿದರು. ಸಂಜೆಯ ಬೌದ್ಧಿಕ ವರ್ಗದ ಬಳಿಕ ಉಡುಪಿಗೆ ತೆರಳಿದರು. ಐದು ದಿನ ಕರಾವಳಿ ವಾಸ್ತವ್ಯ
ಆರೆಸ್ಸೆಸ್ ಶತಮಾನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಂತ ಪ್ರವಾಸ ಕೈಗೊಂಡಿರುವ ಡಾ| ಮೋಹನ ಭಾಗವತ್ ಅವರು ಡಿ. 6ರಂದು ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಡಿ. 7ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನೂ ಎರಡು ದಿನ ಕಾಲ ಮಂಗಳೂರಿನಲ್ಲೇ ಇರಲಿರುವ ಡಾ| ಭಾಗವತ್ ಅವರು ಆರೆಸ್ಸೆಸ್ ಶತಮಾನ ಪೂರ್ತಿ ಹಿನ್ನೆಲೆಯಲ್ಲಿ ಪಂಚ ಪರಿವರ್ತನೆ ಬಗ್ಗೆ ವಿವರವಾದ ಚರ್ಚೆ ನಡೆಸಲಿದ್ದಾರೆ. ಹಲವು ಸ್ತರಗಳ ಬೈಠಕ್ ನಡೆಯಲಿದ್ದು, ಸಾಮರಸ್ಯ, ಕುಟುಂಬ ಪ್ರಬೋಧನ, ಪರ್ಯಾವರಣ, ನಾಗರಿಕ ಕರ್ತವ್ಯ ಮತ್ತು ಸ್ವದೇಶಿ ಚಿಂತನೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಚಿಂತನ ಮಂಥನ ನಡೆಯಲಿದೆ. ಇವೆಲ್ಲವೂ ಸಂಘದ ಆಂತರಿಕ ಬೈಠಕ್‌ಗಳಾಗಿದ್ದು, ಆಹ್ವಾನಿತರಿಗಷ್ಟೇ ಭಾಗವಹಿಸಲು ಅವಕಾಶ ಇದೆ. ಪುತ್ತೂರಿನಲ್ಲಿ ನಡೆದ ಆರೆಸ್ಸೆಸ್ ಅಖಿಲ ಭಾರತೀಯ ಕಾರ್ಯಕಾರಿಣಿ ಸಭಾ ಬಿಟ್ಟರೆ ಪ್ರಾಂತ ಪ್ರವಾಸದ ವೇಳೆ ಸರಸಂಘಚಾಲಕರೊಬ್ಬರು ಕರಾವಳಿಯಲ್ಲಿ ಐದು ದಿನ ವಾಸ್ತವ್ಯ ಹೂಡಿರುವುದು ಇದೇ ಪ್ರಥಮ ಬಾರಿ. ಝೆಡ್ ಪ್ಲಸ್ ಭದ್ರತೆ ಹೊಂದಿರುವ ಸರಸಂಘಚಾಲಕರ ಪ್ರವಾಸ, ವಾಸ್ತವ್ಯದ ಹಿನ್ನೆಲೆಯಲ್ಲಿ ಪೊಲೀಸರು ಅವರ ವಾಸ್ತವ್ಯದ ಸ್ಥಳ ಹಾಗೂ ಭೇಟಿಯ ಸ್ಥಳದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ.